
ಈ 20 ರ ಹರೆಯದ ಯುವತಿ ಟಾಯ್ಲೆಟ್ ನಲ್ಲಿ ಮಗುವಿಗೆ ಜನ್ಮ ನೀಡುವವರೆಗೆ ತಾನು ಗರ್ಭಿಣಿಯಾಗಿದ್ದೇನೆ ಎಂದು ಗೊತ್ತೇ ಇರಲಿಲ್ಲವಂತೆ!
ಬ್ರಿಟಿಷ್ ಯುವತಿ ಜೆಸ್ ಡೇವಿಸ್ ಈ ವಿಚಾರವನ್ನು ಬಹಿರಂಗಪಡಿಸಿರುವುದು ಟಿಕ್ ಟಾಕ್ ನಲ್ಲಿ ಭಾರೀ ವೈರಲ್ ಆಗಿದೆ.
ನಿಜಕ್ಕೂ ಜೂನ್ 11 ರಂದು ನನಗೆ ಪ್ರಸವ ವೇದನೆ ಆಗುವವರೆಗೆ ನಾನು ಗರ್ಭಿಣಿಯಾಗಿದ್ದೇನೆ ಎಂಬುದೇ ಗೊತ್ತಿರಲಿಲ್ಲ ಎಂದು ಈಕೆ ಹೇಳಿಕೊಂಡಿದ್ದಾಳೆ.
ಜೂನ್ 12 ರಂದು ರಾತ್ರಿ ತನ್ನ 20 ನೇ ಹುಟ್ಟುಹಬ್ಬ ಆಚರಣೆಗೆ ಹೊರಗೆ ಹೋಗಲು ಈಕೆ ಸಿದ್ಧತೆ ನಡೆಸಿ ಜೂನ್ 11 ರಂದು ರಾತ್ರಿ ಮಲಗಿದ್ದಾಳೆ. ಆದರೆ, ಇದ್ದಕ್ಕಿದ್ದಂತೆಯೇ ಭಾರೀ ಹೊಟ್ಟೆನೋವು ಕಾಣಿಸಿಕೊಂಡಿದೆ.
ಗರ್ಭದಲ್ಲಿಯೇ ಆಗುತ್ತೆ ʼಮಕ್ಕಳʼ ಭಾವನೆಗಳ ಅಭಿವೃದ್ಧಿ
ಈ ಬಗ್ಗೆ ಹೇಳಿಕೊಂಡಿರುವ ಡೇವಿಸ್, ನಾನು ಮರುದಿನ ನನ್ನ ಹುಟ್ಟುಹಬ್ಬ ಪಾರ್ಟಿಗೆ ತಯಾರಿ ನಡೆಸಿದ್ದೆ. ಆದರೆ, ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಅದನ್ನು ಶಮನಗೊಳಿಸಲು ಸ್ನಾನ ಮಾಡಿದೆ. ಆದಾಗ್ಯೂ, ನೋವು ಹೆಚ್ಚಾಯಿತೇ ಹೊರತು ಕಡಿಮೆಯಾಗಲಿಲ್ಲ. ಈ ಸಂದರ್ಭದಲ್ಲಿ ನನಗೆ ಟಾಯ್ಲೆಟ್ ಗೆ ಹೋಗಬೇಕು ಎನಿಸಿತು. ನಾನು ಟಾಯ್ಲೆಟ್ ನಲ್ಲಿ ಕುಳಿತಾಗ ನಾನು ಮಗುವಿಗೆ ಜನ್ಮ ನೀಡುತ್ತೇನೆ ಎಂಬ ಕಿಂಚಿತ್ತೂ ಅರಿವಿರಲಿಲ್ಲ. ಒಂದು ಹಂತದಲ್ಲಿ ಅಳು ಸಹ ಬಂದಿತು. ಏಕೆ ಹೀಗೆ ಆಗುತ್ತಿದೆ ಎಂದು ಗೊತ್ತಾಗಲಿಲ್ಲ ಎಂದಿದ್ದಾರೆ.
ಈ ಪ್ರಕ್ರಿಯೆ ಆಗುತ್ತಿದ್ದಾಗಲೇ ಮಗು ಅಳುವುದು ಕೇಳಿಸಿದಾಗಲೇ ತಾನು ಮಗುವಿಗೆ ಜನ್ಮ ನೀಡಿರುವುದು ಗೊತ್ತಾಯಿತು ಎಂದು ಆಕೆ ಹೇಳಿಕೊಂಡಿದ್ದಾಳೆ.