ಆಚಾರ್ಯ ಚಾಣಕ್ಯ ಮಹಿಳೆ-ಪುರುಷ ಸಂಬಂಧ ಸೇರಿದಂತೆ ಅವ್ರ ವ್ಯಕ್ತಿತ್ವದಿಂದ ಹಿಡಿದು ಜೀವನ ನಿರ್ವಹಣೆಯವರೆಗೆ ಅನೇಕ ವಿಷ್ಯಗಳನ್ನು ಹೇಳಿದ್ದಾರೆ. ಮಹಿಳೆ, ಪುರುಷರಿಗಿಂತ ಕೆಲ ವಿಷ್ಯದಲ್ಲಿ ಮುಂದಿರುತ್ತಾರೆ ಎಂದು ಚಾಣಕ್ಯ ಹೇಳಿದ್ದಾರೆ.
ಚಾಣಕ್ಯ ಪ್ರಕಾರ ಪುರುಷರಿಗೆ ಹೋಲಿಸಿದ್ರೆ ಮಹಿಳೆಯರಿಗೆ ಹೆಚ್ಚು ಹಸಿವಾಗುತ್ತದೆಯಂತೆ. ಮಹಿಳೆಯರು ಪುರುಷರಿಗಿಂತ ಹೆಚ್ಚು ಆಹಾರ ಸೇವನೆ ಮಾಡ್ತಾರೆಂದು ಅವರು ಹೇಳಿದ್ದಾರೆ. ಮಹಿಳೆಯರ ದೇಹ ರಚನೆಯಿಂದ ಮಹಿಳೆಯರಿಗೆ ಹೆಚ್ಚಿನ ಶಕ್ತಿ ಅಗತ್ಯವಿರುತ್ತದೆ. ಹಾಗಾಗಿ ಅವರು ಹೆಚ್ಚು ಆಹಾರ ಸೇವನೆ ಮಾಡುತ್ತಾರೆಂದು ಚಾಣಕ್ಯ ಹೇಳಿದ್ದಾರೆ.
ಮಹಿಳೆಯರು ಪುರುಷರಿಗಿಂತ ಚುರುಕಾಗಿದ್ದಾರೆ. ಅವರು ಪುರುಷರಿಗಿಂತ ಹೆಚ್ಚಿನ ಪ್ರಜ್ಞೆಯನ್ನು ಹೊಂದಿದ್ದಾರೆ. ಮಹಿಳೆಯರು ತಮ್ಮ ಬುದ್ಧಿವಂತಿಕೆಯಿಂದ ಜೀವನದಲ್ಲಿ ಕಷ್ಟಗಳನ್ನು ಸುಲಭವಾಗಿ ಬಗೆಹರಿಸುತ್ತಾರೆಂದು ಚಾಣಕ್ಯ ಹೇಳಿದ್ದಾರೆ.
ಸಾಮಾನ್ಯ ಜನರಲ್ಲಿ ಮಹಿಳೆಯರು ಪುರುಷರಿಗಿಂತ ದುರ್ಬಲರು ಎಂಬ ನಂಬಿಕೆ ಇದೆ. ಆದರೆ ಚಾಣಕ್ಯ ಇದಕ್ಕೆ ವಿರುದ್ಧವಾಗಿ ಯೋಚಿಸುತ್ತಾರೆ. ಅವರ ಪ್ರಕಾರ ಪುರುಷರಿಗಿಂತ ಮಹಿಳೆಯರಿಗೆ 6 ಪಟ್ಟು ಹೆಚ್ಚು ಧೈರ್ಯವಿರುತ್ತದೆಯಂತೆ.
ಚಾಣಕ್ಯನ ಪ್ರಕಾರ ಮಹಿಳೆಯರು ಪುರುಷರಿಗಿಂತ ಹೆಚ್ಚು ಕಾಮುಕರಾಗಿರ್ತಾರಂತೆ. ಈ ಭಾವನೆ ಪುರುಷರಿಗಿಂತ ಮಹಿಳೆಯರಲ್ಲಿ 8 ಪಟ್ಟು ಹೆಚ್ಚಿರುತ್ತದೆಯಂತೆ.