ರೈಲಿನಲ್ಲಿ ಪ್ರಯಾಣಿಸುವಾಗ ಆಕಸ್ಮಿಕವಾಗಿ ಅಥವಾ ಹುಚ್ಚಾಟ ನಡೆಸಿ ದೇಶದಲ್ಲಿ ಪ್ರತಿವರ್ಷ ಸಾವಿರಾರು ಜನ ಪ್ರಾಣ ಕಳೆದುಕೊಳ್ಳುತ್ತಾರೆ. ಆದರೂ ಎಚ್ಚರಿಕೆ ವಹಿಸುತ್ತಿಲ್ಲ.
ಗುರುವಾರ ಮುಂಬೈನಲ್ಲಿ ಚಲಿಸುತ್ತಿದ್ದ ಲೋಕಲ್ ರೈಲಿನ ಫುಟ್ಬೋರ್ಡ್ನಲ್ಲಿನಿಂತು ನೇತಾಡುತ್ತಿದ್ದಾಗ ಕಂಬಕ್ಕೆ ತಲೆ ಬಡಿದು ಯುವಕನೊಬ್ಬ ರೈಲಿನಿಂದ ಬಿದ್ದಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾರ್ಮಿಕರ ಕನಿಷ್ಠ ವೇತನ 32 ಸಾವಿರ ರೂ. ನಿಗದಿಗೆ ಹೆಚ್ಚಿದ ಒತ್ತಡ
ದಾನಿಶ್ ಝಾಕಿರ್ ಹುಸೇನ್ ಎಂದು ಗುರುತಿಸಲಾದ ವ್ಯಕ್ತಿ ಥಾಣೆಯ ಕಲ್ವಾದಿಂದ ಮುಂಬೈನ ದಾದರ್ಗೆ ಬೆಳಿಗ್ಗೆ 9:30ಕ್ಕೆ ರೈಲು ಹತ್ತಿದ್ದು, ಇತರ ಕೆಲವು ಯುವಕರೊಂದಿಗೆ ರೈಲಿನ ಫುಟ್ಬೋರ್ಡ್ನಲ್ಲಿ ನೇತಾಡುತ್ತಿದ್ದನು. ಆತನ ತಲೆ ಕಂಬಕ್ಕೆ ಡಿಕ್ಕಿ ಹೊಡೆದ ನಂತರ ಎಸೆಯಲ್ಪಟ್ಟು, ರೈಲು ಹಳಿಗಳ ಮೇಲೆ ಬಿದ್ದಿದ್ದಾನೆ. ಹುಸೇನ್ನನ್ನು ಕಲ್ವಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.