ಮಹಾರಾಷ್ಟ್ರ ರಾಜಕಾರಣದಲ್ಲಿ ಕ್ಷಣಕ್ಕೊಂದು ನಾಟಕೀಯ ಬೆಳವಣಿಗೆಗಳು ನಡೆಯುತ್ತಿದ್ದು, 30ಕ್ಕೂ ಅಧಿಕ ಶಾಸಕರೊಂದಿಗೆ ಗುಜರಾತಿನ ಸೂರತ್ ತೆರಳಿದ್ದ ಶಿವಸೇನೆಯ ಏಕನಾಥ್ ಶಿಂಧೆ ಇದೀಗ ಅಸ್ಸಾಂ ನ ಗೌಹಾತಿಗೆ ತೆರಳಿ ಅಲ್ಲಿನ ಪಂಚತಾರಾ ಹೋಟೆಲ್ ರಾಡಿಸನ್ ಬ್ಲೂ ನಲ್ಲಿ ತಂಗಿದ್ದಾರೆ.
ಏಕನಾಥ್ ಶಿಂಧೆ ಅವರಿಗೆ ಈಗ ಮತ್ತಷ್ಟು ಶಾಸಕರು ಬೆಂಬಲ ಸೂಚಿಸಿ ಗೌಹಾತಿಗೆ ಬರುತ್ತಿದ್ದು, ಪಂಚತಾರಾ ಹೋಟೆಲ್ ರಾಡಿಸನ್ ಬ್ಲೂ ನಲ್ಲಿ 70ಕ್ಕೂ ಅಧಿಕ ರೂಮುಗಳನ್ನು ಬುಕ್ ಮಾಡಲಾಗಿದೆ. ಅಲ್ಲದೆ ಹೋಟೆಲ್ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ತಮ್ಮ ರಾಜ್ಯದ ದೊಡ್ಡ ನಗರವೊಂದರಲ್ಲಿ ನಡೆಯುತ್ತಿರುವ ಈ ಹೈಡ್ರಾಮಾ ಕುರಿತಂತೆ ಅಸ್ಸಾಂ ಮುಖ್ಯಮಂತ್ರಿ ಸಿಮೆಂಟ್ ಬಿಸ್ವ ಶರ್ಮಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಅವರು, ಮಹಾರಾಷ್ಟ್ರ ಶಾಸಕರು ಇಲ್ಲಿದ್ದಾರೆ ಎಂಬ ಸಂಗತಿಯೇ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.