ಭಾರತೀಯರು ರೂಲ್ಸ್ ಬ್ರೇಕ್ ಮಾಡುವುದ್ರಲ್ಲಿ, ನಂಬರ್ 1 ಅನ್ನೋದ್ರಲ್ಲಿ ದೂಸರಾ ಮಾತೇ ಇಲ್ಲ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವ ಒಂದಿಲ್ಲ ಒಂದು ವಿಡಿಯೋ ವೈರಲ್ ಆಗ್ತಾನೇ ಇರುತ್ತೆ. ಇಲ್ಲಿದೆ ನೋಡಿ ಇನ್ನೊಂದು ಲೇಟೆಸ್ಟ್ ವಿಡಿಯೋ.
ಈ ವಿಡಿಯೋ ನೋಡಿ ರೂಲ್ಸ್ ಬ್ರೇಕ್ ಮಾಡ್ತಿದ್ದಾನೆ ಅನ್ನೋದಕ್ಕಿಂತ ಹೆಚ್ಚಾಗಿ, ಈ ಬೈಕ್ ಸವಾರ ಇದ್ದುದ್ದರಲ್ಲೇ ಹೇಗೆ ಅಡ್ಜೆಸ್ಟ್ ಮಾಡಿಕೊಳ್ತಿದ್ದಾನೆ. ಒಂದು ಬೈಕ್ ನಲ್ಲಿ ಇಬ್ಬರಿಗೆ ಮಾತ್ರ ಕುಳಿತುಕೊಳ್ಳುವ ಅವಕಾಶ ಇರುತ್ತೆ, ಇನ್ನೂ ಹೆಚ್ಚೆಂದರೆ ಒಂದು ಮಗುವನ್ನ ಅಡ್ಜೆಸ್ಟ್ ಮಾಡಿ ಕುಳಿತುಕೊಳ್ಳಬಹುದು. ಆದರೆ ಈ ವಿಡಿಯೋ ನೋಡಿದ್ರೆ ಶಾಕ್ ಆಗಿ ಬಿಡ್ತಿರಾ, ಈ ಒಂದು ಬೈಕ್ ನಲ್ಲಿ 7 ಜನ ಕುಳಿತುಕೊಂಡಿದ್ದಾರೆ. ಮೂವರು ದೊಡ್ಡವರು ಇನ್ನೂ ನಾಲ್ಕು ಜನ ಮಕ್ಕಳು
BIG NEWS: ಪಠ್ಯ ಪರಿಷ್ಕರಣೆಗೆ ಮತ್ತೊಂದು ಸಮಿತಿ, ರೋಹಿತ್ ಚಕ್ರತೀರ್ಥ ತಪ್ಪು ತಿದ್ದಲು ಮುಂದಾದ ಸರ್ಕಾರ
ಮನುಷ್ಯ ಜೀವನದಲ್ಲಿ ಅಡ್ಜೆಸ್ಟ್ ಮಾಡ್ಕೊಂಡು ಹೋಗ್ಬೇಕು ನಿಜ. ಆದರೆ ಇದು ಮೀತಿಮೀರಿದ ಅಡ್ಜೆಸ್ಟ್ ಮೆಂಟ್. ಹೀಗೆ ಬೈಕ್ ಏರಿ ಕುಳಿತುಕೊಂಡರೆ, ಬ್ಯಾಲೆನ್ಸ್ ಮಾಡುವುದು ಕಷ್ಟ, ದುರದೃಷ್ಟವಶಾತ್ ಏನಾದರೂ ಆಗಿದ್ದೇ ಆದ್ರೆ ಬೈಕ್ ಮೇಲಿದ್ದವರಿಗೆಲ್ಲ ಅಪಾಯ ತಪ್ಪಿದ್ದಲ್ಲ. ದುಡ್ಡು ಉಳಿಸಬೇಕು ಅನ್ನೋ ಹುಚ್ಚಾಸೆಗೆ ಇಂತಹ ಸಾಹಸ ಮಾಡಬೇಕಾ?
ಬೈಕ್ ಓಡಿಸೋವ್ನಿಗೆ ಬುದ್ಧಿ ಇಲ್ಲ ಅಂತ ಈ ವಿಡಿಯೋ ನೋಡಿದವರೆಲ್ಲ ಗರಂ ಆಗಿದ್ದಾರೆ. ಕೆಲವರು ಈ ವಿಡಿಯೋ ನೋಡಿ ತಮಾಷೆ ಮಾಡಿದ್ರೆ, ಇನ್ನೂ ಕೆಲವರು ಕಂಜೂಸುತನಕ್ಕೂ ಒಂದು ಮಿತಿ ಇದೆ ಅಂತ ಉಗಿಯುತ್ತಿದ್ದಾರೆ.