ಸ್ಪೆಷಲ್ ಮಿಡಿಯಾದಲ್ಲಿ ಹೊಸ ಹೊಸ ಟ್ರೆಂಡ್ಸ್ಗಳು ಹುಟ್ಟಿಕೊಳ್ತಾನೇ ಇರುತ್ತೆ. ಅದರ ಜೊತೆಗೆ ನಗು ಉಕ್ಕಿಸುವ ಮೆಮ್ಸ್ಗಳು ಕೂಡಾ ನೋಡಲು ಸಿಗ್ತಾ ಇರುತ್ತೆ. ಆದರೆ ಈ ಬಾರಿ Funny Memes ಗೆ ಆಹಾರವಾಗ್ತಿದೆ 2006ರಲ್ಲಿ ರಿಲೀಸ್ ಆಗಿದ್ದ ಹೃತಿಕ್ ರೋಶನ್ ಹಾಗೂ ಪ್ರಿಯಾಂಕಾ ಚೋಪ್ರಾ ನಟನೆಯ ಕ್ರಿಶ್ ಸಿನೆಮಾದ ಒಂದು ಇಮೋಶ್ನಲ್ ಸೀನ್. ಈ ಸೀನ್ ಇಟ್ಟುಕೊಂಡೇ ಚಿತ್ರ-ವಿಚಿತ್ರ ಅಷ್ಟೆ ತಮಾಷೆಯ ಮಿಮ್ಸ್ಗಳನ್ನ ನೆಟ್ಟಿಗರು ಮಾಡ್ತಿದ್ದಾರೆ.
ಕ್ರಿಶ್ ಸಿನೆಮಾ ನೋಡಿದ್ದೇ ಆದರೆ ನಿಮಗೆ ಈ ಸೀನ್ ನೆನಪಿರಬಹುದು, ಪ್ರಿಯಾಕಾ ಹಾಗೂ ಆಕೆಯ ಗೆಳೆಯರು ಕ್ಯಾಂಪಿಂಗ್ ಅಂತ ಬಂದಿರುತ್ತಾರೆ. ಕ್ಯಾಂಪಿಂಗ್ ನಂತರ ಅವರು ತಮ್ಮ ತಮ್ಮ ಮನೆಗಳಿಗೆ ಬಸ್ನಲ್ಲಿ ತೆರಳುತ್ತಾರೆ. ಕೃಷ್ಣಾ ಅಂದರೆ ಹೃತಿಕ್ ರೋಶನ್, ಅವರು ಹೊರಟು ಹೋಗುತ್ತಿರೋದನ್ನ ನೋಡಿ ಭಾವುಕರಾಗಿರೋ ದೃಶ್ಯ ಅದು. ಅವರು ದೂರವಾಗ್ತಿದ್ದಾರೆ ಅಂತ ಬಸ್ ಹಿಂದೆ ಓಡಿ ಹೋಗಿ, ಬಸ್ ಒಳಗಿದ್ದ ಪ್ರಿಯಾಂಕಾ ಕೈ ಹಿಡಿದು ಬಾಯ್-ಬಾಯ್ ಹೇಳುತ್ತಾನೆ ಕೃಷ್ಣ. ಬಸ್ ದೂರ ಹೋದಷ್ಟು ಬೆಟ್ಟ ಗುಡ್ಡ ಹತ್ತಿ ಬಸ್ ಹೋಗೋದನ್ನೇ ನೋಡ್ತಾ ಇರ್ತಾನೆ. ಅವರಿಂದ ದೂರ ಆದನೆಂಬ ಬೇಸರದಲ್ಲಿ ಕಣ್ಣೀರು ಹಾಕುತ್ತಾನೆ. ಅಂದು ಈ ದೃಶ್ಯ ನೋಡಿವರೆಲ್ಲರೂ ಕಣ್ಣೀರು ಹಾಕಿದ್ದರು. ಈಗ ಇದೇ ದೃಶ್ಯ Funny Memes ಗಳಾಗ್ತಿವೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ಈ ದೃಶ್ಯಕ್ಕೆ ಒಬ್ಬರು “ಮನೆಗೆ ಬಂದ ಸಂಬಂಧಿಕರು ದುಡ್ಡು ಕೊಡದೇ ಹಾಗೆ ವಾಪಸ್ಸು ಹೋದಾಗ ಆಗುವ ನೋವು“ ಇದಕ್ಕೆನೇ ಇನ್ನೊಬ್ಬರು “ಅಂಗಡಿಯಲ್ಲಿದ್ದ ಎಲ್ಲ ಸ್ಟಾಕ್ ಕಡಿಮೆ ಬೆಲೆಗೆ ಮಾರಾಟ ಆದಾಗ ಆಗೋ ಭಾವನೆ ಹೀಗೆನೇ“ ಇನ್ನೊಬ್ಬ ಮಹಾಶಯರಂತೂ “ಬೇರೆಯವರು ಪದೇ ಪದೇ ಟ್ರಾವೆಲಿಂಗ್ ಹೋದಾಗ ನನಗೆ ಆಗೋ ಭಾವನೆ ಹೀಗೆನೇ ಇರುತ್ತೆ“ “ ಪರೀಕ್ಷೆ ಸಮಯದಲ್ಲಿ ಕಣ್ಣೆದುರೇ ಸ್ಕೂಲ್ ಬಸ್ ಮಿಸ್ ಆದಾಗ“ ಅಂತ ಒಬ್ಬರು ಮಿಮ್ಸ್ ಮಾಡಿದ್ದಾರೆ.
ಹಾಗೇನೇ “ನನ್ನ ಗೆಳೆಯ ಬೇರೆ ಊರಿಗೆ ವಿದ್ಯಾಭ್ಯಾಸಕ್ಕೆಂದು ಹೋದಾಗ ನಾನು ಹೀಗೆಯೇ ನೋಡುತ್ತೇನೆ ಅಂತ ಇನ್ನೊಬ್ಬರು ಬರೆದಿದ್ದಾರೆ. ಹೀಗೆ ಒಬ್ಬಬ್ಬೊರು, ಒಂದೊಂದು ರೀತಿಯಲ್ಲಿ ಮಿಮ್ಸ್ಗಳನ್ನು ಫನ್ನಿಯಾಗಿ ಮಾಡಿದ್ದಾರೆ. ಇದನ್ನ ಓದೋರ ಮನಸ್ಸಿಗೆ ಕಚಗುಳಿ ಕೊಡ್ತಿರೋದಂತೂ ನಿಜ.
https://twitter.com/Amandee92826548/status/1538865329186557952?ref_src=twsrc%5Etfw%7Ctwcamp%5Etweetembed%7Ctwterm%5E1538865329186557952%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Femotional-scene-from-hrithik-roshan-s-krrish-is-now-a-hilarious-meme-best-ones-1965640-2022-06-22