alex Certify ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಟ್ಟಿದೆ ‘ಚಪಾತಿ’ ಚಾಲೆಂಜ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಟ್ಟಿದೆ ‘ಚಪಾತಿ’ ಚಾಲೆಂಜ್..!

ನೀವು ಚಪಾತಿ ತಿನ್ನುತ್ತೀರಿ ಅಲ್ವಾ..? ಆದರೆ, ಯಾರಾದರೂ ಚಪಾತಿಯಿಂದ ಹಲ್ಲೆಗೊಳಗಾಗಿರುವುದನ್ನು ನೀವು ಎಂದಾದರೂ ನೋಡಿದ್ದೀರಾ? ಹೌದು, ಚಪಾತಿಯಿಂದ ಒಬ್ಬರಿಗೊಬ್ಬರು ಹೊಡೆಯುವ ವಿಚಿತ್ರ ಚಾಲೆಂಜ್ ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಟೋರ್ಟಿಲ್ಲಾ ಚಾಲೆಂಜ್ ಇನ್ಸ್ಟಾಗ್ರಾ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಜನಪ್ರಿಯವಾಗುತ್ತಿದೆ.

ಟೋರ್ಟಿಲ್ಲಾ ಸವಾಲನ್ನು ತೋರಿಸುವ ವಿಡಿಯೋವನ್ನು ಇತ್ತೀಚೆಗೆ ಇನ್ಸ್ಟಾಗ್ರಾಂ ಖಾತೆ ವೈರಲ್‌ಹಾಗ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇದು ವಿಚಿತ್ರ ವಿಡಿಯೋಗಳಿಗೆ ಹೆಸರುವಾಸಿಯಾಗಿದೆ. ವಿಡಿಯೋ ಸಾಕಷ್ಟು ತಮಾಷೆಯಾಗಿದೆ. ಏಕೆಂದರೆ ಜನರು ಚಪಾತಿಗಳೊಂದಿಗೆ ಪರಸ್ಪರ ಹೊಡೆದುಕೊಳ್ಳುತ್ತಿದ್ದಾರೆ.

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, ಮೂವರು ಪರಸ್ಪರರ ಮುಂದೆ ನಿಂತಿದ್ದಾರೆ. ಕೈಯ್ಯಲ್ಲಿ ಚಪಾತಿ ಹಿಡಿದಿದ್ದರೆ, ಬಾಯಲ್ಲಿ ನೀರು ತುಂಬಿದ್ದಾರೆ. ಮೊದಲ ವ್ಯಕ್ತಿ ನಕ್ಕ ತಕ್ಷಣ, ಎಲ್ಲರೂ ಒಬ್ಬರಿಗೊಬ್ಬರು ನೀರನ್ನು ಉಗುಳುತ್ತಾರೆ ಮತ್ತು ಚಪಾತಿಯೊಂದಿಗೆ ಪರಸ್ಪರ ಹೊಡೆಯಲು ಪ್ರಾರಂಭಿಸುತ್ತಾರೆ.

ಟೋರ್ಟಿಲ್ಲಾ ಚಾಲೆಂಜ್ ಅನ್ನು ಮೊದಲು ಟಿಕ್‌ಟಾಕ್‌ನಲ್ಲಿ ಪ್ರಾರಂಭಿಸಲಾಯಿತು. ಇದರಲ್ಲಿ ಭಾಗವಹಿಸುವವರು ಪರಸ್ಪರರ ಮುಂದೆ ಸ್ಥಿರವಾಗಿ ನಿಲ್ಲುತ್ತಾರೆ. ಮೊದಲು ನಗುವವನಿಗೆ ಚಪಾತಿ ಹೊಡೆಯುತ್ತಾರೆ ಮತ್ತು ಇತರರು ಅವರ ಮೇಲೆ ನೀರು ಚೆಲ್ಲುತ್ತಾರೆ.‌

ಈ ವಿಡಿಯೊ 1.5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಈ ವಿಡಿಯೋಗೆ ನೆಟ್ಟಿಗರಿಂದ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ತಮಾಷೆಯಾಗಿ ಪ್ರತಿಕ್ರಿಯಿಸಿದ್ರೆ, ಇನ್ನೂ ಕೆಲವರು ಈ ಸವಾಲನ್ನು ಟೀಕಿಸಿದ್ರು. ಎಲ್ಲರೂ ಕೊರೋನಾ ಮಹಾಮಾರಿಯನ್ನು ಮರೆತಿದ್ದೀರಾ..? ಸಾಂಕ್ರಾಮಿಕ ರೋಗ ಕಾಲಿಟ್ಟ ನಂತರ ಲಾಕ್ ಡೌನ್ ನಿಂದಾಗಿ ಹಲವಾರು ಮಂದಿ ತುತ್ತು ಅನ್ನಕ್ಕಾಗಿ ಕಷ್ಟಪಟ್ಟಿದ್ದಾರೆ. ಆದರೆ, ಇವರೆಲ್ಲಾ ಮೋಜಿಗಾಗಿ ಈ ರೀತಿಯಾಗಿ ವ್ಯರ್ಥ ಮಾಡುತ್ತಿದ್ದಾರೆ ಎಂದು ಟೀಕಿಸಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...