ಸ್ಥೂಲಕಾಯ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆ. ತೂಕ ಇಳಿಸಿಕೊಳ್ಳಲು ಜನರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ವ್ಯಾಯಾಮ, ಜಿಮ್, ಡಯೆಟ್ ಹೀಗೆ ಎಲ್ಲ ಪ್ರಯತ್ನ ಮಾಡಿ ಬೋರ್ ಆಗಿದ್ರೆ ಈ ಟಿಪ್ಸ್ ಅನುಸರಿಸಿ. ನಿಮ್ಮ ಆಹಾರದಲ್ಲಿ ಈ ಒಂದು ಹಣ್ಣನ್ನು ಸೇರಿಸಿ ತೂಕ ಇಳಿಸಿಕೊಳ್ಳಿ.
ಪಪ್ಪಾಯಿ ಎಲ್ಲರಿಗೂ ಇಷ್ಟವಾಗುವ ಹಣ್ಣು. ಎಲ್ಲಾ ಪೋಷಕಾಂಶಗಳು ಇದ್ರಲ್ಲಿವೆ. ಇದು ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎಲ್ಲ ಋತುವಿನಲ್ಲೂ ಇದು ಸಿಗುತ್ತದೆ. ಪ್ರತಿ ದಿನ ಪಪ್ಪಾಯಿ ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ. ಆದರೆ ಇದರ ದೊಡ್ಡ ಲಾಭವೆಂದರೆ ತೂಕ ಇಳಿಸುವುದು.
ಪಪ್ಪಾಯಿಯನ್ನು ಫ್ರೂಟ್ ಸಲಾಡ್, ಮಿಲ್ಕ್ ಶೇಕ್ ರೀತಿಯಲ್ಲಿ ನೀವು ಸೇವನೆ ಮಾಡಬಹುದು. ಪಪ್ಪಾಯಿ ಹಸಿವನ್ನು ಕಡಿಮೆ ಮಾಡುತ್ತದೆ. ಕ್ಯಾಲೋರಿ ಕಡಿಮೆ ಇರುವ ಕಾರಣ ತೂಕ ಕಡಿಮೆಯಾಗಲು ನೆರವಾಗುತ್ತದೆ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಪ್ರೋಟೀನ್ ಇರುವ ಆಹಾರ ಸೇವನೆ ಮಾಡಬೇಕು. ಪಪ್ಪಾಯಿಯಲ್ಲಿ ಪ್ರೋಟೀನ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಜೀರ್ಣಕ್ರಿಯೆಯನ್ನು ಇದು ಸುಲಭಗೊಳಿಸುತ್ತದೆ. ದೇಹದಲ್ಲಿನ ಉರಿಯೂತ ಮತ್ತು ಕಿರಿಕಿರಿಯ ಸಮಸ್ಯೆಯನ್ನು ನಿವಾರಿಸುವುದರ ಜೊತೆಗೆ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ. ಮಲಬದ್ಧತೆಗೆ ಇದು ಒಳ್ಳೆಯ ಮದ್ದು.