alex Certify ಐಟಿ ಉದ್ಯೋಗ ತೊರೆದು ಕತ್ತೆ ಹಾಲಿನ ಫಾರ್ಮ್ ತೆರೆದ ವ್ಯಕ್ತಿಯಿಂದ ಲಕ್ಷ ಲಕ್ಷ ಗಳಿಕೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಟಿ ಉದ್ಯೋಗ ತೊರೆದು ಕತ್ತೆ ಹಾಲಿನ ಫಾರ್ಮ್ ತೆರೆದ ವ್ಯಕ್ತಿಯಿಂದ ಲಕ್ಷ ಲಕ್ಷ ಗಳಿಕೆ…..!

ಮಂಗಳೂರು: ಇತ್ತೀಚೆಗೆ ಬಹುತೇಕ ಯುವಕರು ಹಳ್ಳಿಗಳಿಂದ ವಿಮುಖರಾಗಿ ಪಟ್ಟಣದತ್ತ ವಾಲುತ್ತಿದ್ದಾರೆ. ಅಂಥಾದ್ರಲ್ಲಿ ಇಲ್ಲೊಬ್ಬರು ಕೈ ತುಂಬಾ ಸಂಬಳ ಪಡೆಯುತ್ತಿದ್ದ ಐಟಿ ಉದ್ಯೋಗ ತೊರೆದು ತಮ್ಮ ಹಳ್ಳಿಯತ್ತ ಮುಖ ಮಾಡಿ ಕತ್ತೆ ಸಾಕಣಿಕೆಯನ್ನು ಪ್ರಾರಂಭಿಸಿದ್ದಾರೆ.

ಹೌದು, ಕಾರ್ಪೊರೇಟ್ ಸಂಕೋಲೆಗಳಿಂದ ಮುಕ್ತರಾಗಿ ಹಳ್ಳಿಯತ್ತ ಮುಖ ಮಾಡಿದ್ದಾರೆ 42 ವರ್ಷದ ಶ್ರೀನಿವಾಸ್ ಗೌಡ ಅವರು. ಅಷ್ಟೇ ಅಲ್ಲ ಅವರು ಅತ್ಯಂತ ಅಸಾಂಪ್ರದಾಯಿಕ ಉದ್ಯಮವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಶ್ರೀನಿವಾಸ್ ಗೌಡ ಅವರು ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಕತ್ತೆ ಸಾಕಣೆಯನ್ನು ತೆರೆದಿದ್ದಾರೆ. ಇದು ರಾಜ್ಯದಲ್ಲೇ ಮೊದಲನೆಯದಾಗಿದೆ. ಕೇರಳದ ಎರ್ನಾಕುಲಂ ಜಿಲ್ಲೆಯ ನಂತರ ದೇಶದಲ್ಲೇ ಎರಡನೆಯದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇತ್ತೀಚೆಗೆ ಜೂನ್ 8ರಂದು ಈ ಫಾರ್ಮ್ ಅನ್ನು ಪ್ರಾರಂಭಿಸಲಾಯಿತು.

ಬಿ.ಎ. ಪದವೀಧರರಾಗಿರುವ ಶ್ರೀನಿವಾಸ್ ಗೌಡ ಅವರು ಈ ಹಿಂದೆ 2020ರ ವರೆಗೆ ಸಾಫ್ಟ್‌ವೇರ್ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು. ತಮ್ಮ ಉದ್ಯೋಗವನ್ನು ತೊರೆದ ಅವರು ಇರಾ ಗ್ರಾಮದ ಸುಮಾರು 2.3 ಎಕರೆ ಪ್ರದೇಶದಲ್ಲಿ ಐಸಿರಿ ಫಾರ್ಮ್‌ಗಳನ್ನು ಪ್ರಾರಂಭಿಸಿದರು. ಆರಂಭದಲ್ಲಿ ಅವರು ಉತ್ತಮ ತಳಿಯೊಂದಿಗೆ ಪ್ರಾರಂಭಿಸಿದರು. ಫಾರ್ಮ್‌ನಲ್ಲಿ ಈಗಾಗಲೇ ಮೇಕೆಗಳ ಜೊತೆಗೆ ವಿಭಿನ್ನ ತಳಿಯ ಕೋಳಿಗಳಿವೆ. ಇದೀಗ ಕತ್ತೆಗಳು ಇದಕ್ಕೆ ಸೇರ್ಪಡೆಯಾಗಿದೆ. 20 ಕತ್ತೆಗಳೊಂದಿಗೆ ಕತ್ತೆ ಸಾಕಣೆ ಆರಂಭವಾಗಿದೆ.

ಲಾಂಡ್ರಿ ಯಂತ್ರಗಳು ಮತ್ತು ಇತರ ತಂತ್ರಜ್ಞಾನಗಳಿಂದಾಗಿ ಧೋಬಿಗಳು ಕತ್ತೆಗಳನ್ನು ಉಪಯೋಗಿಸುತ್ತಿಲ್ಲವಾದರಿಂದ ಅವುಗಳ ಸಂಖ್ಯೆಯು ಕುಸಿಯುತ್ತಿದೆ. ಕತ್ತೆ ಸಾಕಣೆಯ ಕಲ್ಪನೆ ಬಗ್ಗೆ ಹೇಳಿದಾಗ ಹಲವು ಜನರಿಗೆ ಇದರ ಬಗ್ಗೆ ಅರ್ಥವಾಗಿಲ್ಲ. ಕತ್ತೆಯ ಹಾಲು ರುಚಿಕರ, ಬೆಲೆಬಾಳುವ ಮತ್ತು ಔಷಧೀಯವಾಗಿದೆ ಎಂದು ಅವರು ಸಮರ್ಥಿಸುತ್ತಾರೆ.

ಜನರು ಕತ್ತೆ ಹಾಲನ್ನು ಪ್ಯಾಕೆಟ್‌ಗಳಲ್ಲಿ ಖರೀದಿಸಲು ಸಾಧ್ಯವಾಗುತ್ತದೆ. ಅವರ ಪ್ರಕಾರ, 30 ಮಿ.ಲೀ ಹಾಲಿನ ಪ್ಯಾಕೆಟ್‌ಗೆ 150 ರೂ. ವೆಚ್ಚವಾಗಲಿದೆ. ಮಾಲ್‌ಗಳು, ಅಂಗಡಿಗಳು ಮತ್ತು ಸೂಪರ್‌ಮಾರ್ಕೆಟ್‌ಗಳಲ್ಲಿ ಕತ್ತೆ ಹಾಲು ಲಭ್ಯವಿರುತ್ತದೆ. ಈಗಾಗಲೇ ಅವರು 17 ಲಕ್ಷ ರೂ.ಗಳ ಆರ್ಡರ್ ಕೂಡ ಪಡೆದಿದ್ದಾರಂತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...