ಯೌವನದಲ್ಲೇ ಸಾಯುವ ಕುರಿತು ಪೋಸ್ಟ್ ಮಾಡಿದ ಕೆಲವೇ ಗಂಟೆಗಳ ಒಳಗೆ 19 ವರ್ಷದ ಟಿಕ್ಟಾಕ್ ಇನ್ಫ್ಲುಯೆನ್ಸರ್ ಮೃತಪಟ್ಟಿದ್ದಾನೆ. ಇದು ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಅಮೆರಿಕದ ಕ್ಯಾಲಿಫೋರ್ನಿಯಾದ ಕೂಪರ್ ನೊರಿಗಾ ಈ ರೀತಿ ಮೃತರಾದ ಟಿಕ್ಟಾಕ್ ಇನ್ಫ್ಲುಯೆನ್ಸರ್. ಅವರಿಗೆ 20 ಲಕ್ಷ ಫಾಲೋಯರ್ಸ್ ಇದ್ದಾರೆ. ಲಾಸ್ ಏಂಜಲೀಸ್ ಸಮೀಪದ ಮಾಲ್ನ ಪಾರ್ಕಿಂಗ್ ಸ್ಥಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮೃತದೇಹದ ಮೇಲೆ ಯಾವುದೇ ಗಾಯಗಳಿಲ್ಲ. ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಸಾವಿಗೆ ಕೆಲವು ಗಂಟೆಗಳ ಮೊದಲು, ಕೂಪರ್ ಟಿಕ್ಟಾಕ್ನಲ್ಲಿ “who else b thinking they gon d!€ young af” ಎಂಬ ಸಂದೇಶವನ್ನು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಮತ್ತು ಅವರ ಸಾವಿನ ನಡುವೆ ಯಾವುದಾದರೂ ಸಂಬಂಧ ಇದೆಯೇ ಎಂದು ಅರ್ಥಮಾಡಿಕೊಳ್ಳಲು ಫಾಲೋಯರ್ಸ್ ಪ್ರಯತ್ನಿಸುತ್ತಿದ್ದಾರೆ.
ವಾರದ ಮೊದಲ ದಿನವೇ ಹೂಡಿಕೆದಾರರಿಗೆ ಶಾಕ್: ಸೆನ್ಸೆಕ್ಸ್ 1,300 ಅಂಕ ಕುಸಿತ
ಕೂಪರ್ ಅವರು ಮಾನಸಿಕ ಆರೋಗ್ಯಕ್ಕಾಗಿ ಡಿಸ್ಕಾರ್ಡ್ ಪುಟವನ್ನು ಪ್ರಾರಂಭಿಸುತ್ತಿರುವುದಾಗಿ ಜೂನ್ 4 ರಂದು ಘೋಷಿಸಿದ್ದರು. ಮನಸ್ಸಿನ ಮಾತುಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದಕ್ಕೆ ಇದು ಸುರಕ್ಷಿತ ವೇದಿಕೆ ಎಂದೂ ಹೇಳಿದ್ದರು. ಅಲ್ಲದೆ, ಒಂಬತ್ತನೇ ವಯಸ್ಸಿನಿಂದಲೂ ಇದು ನನ್ನನ್ನು ಕಾಡುತ್ತಿದೆ. ನನ್ನ ಈಗಿನ ಇನ್ಫ್ಲುಯೆನ್ಸ್ ಅನ್ನು ಜನರ ಮಾನಸಿಕ ಆರೋಗ್ಯಕ್ಕಾಗಿ ಮೀಸಲು ಬಳಸುವುದಾಗಿ ಹೇಳಿದ್ದರು. ಲಿಪ್-ಸಿಂಕ್ ವಿಡಿಯೊಗಳು ಮತ್ತು ಸಣ್ಣ ರೇಖಾಚಿತ್ರಗಳನ್ನು ಪೋಸ್ಟ್ ಮಾಡುತ್ತ ಕೂಪರ್ ಜನಪ್ರಿಯರಾಗಿದ್ದರು.
ಕೋವಿಡ್ ಸಾಂಕ್ರಾಮಿಕದ ಬಳಿಕ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚಿವೆ ಎಂದು ಕಳೆದ ವರ್ಷ ಹೇಳಿದ್ದರು. ಸಾಂಕ್ರಾಮಿಕ ರೋಗ ಹರಡಿದಾಗಿನಿಂದ ಹೊರಾಂಗಣ ಚಟುವಟಿಕೆಯ ಮೇಲಿನ ನಿರ್ಬಂಧಗಳು ಯುವಕರಲ್ಲಿ ಕಿರಿಕಿರಿ, ಅನಿಯಮಿತ ನಿದ್ರೆ, ಹಸಿವಿನ ಸಮಸ್ಯೆ ಮತ್ತು ತೂಕ ಹೆಚ್ಚಾಗುವ ಸಮಸ್ಯೆಗಳಿಗೆ ಕಾರಣವಾಗಿವೆ ಎಂದು ಭಾರತದ ಅಪೋಲೋ ಆಸ್ಪತ್ರೆಯ ವೈದ್ಯರೂ ಹೇಳಿದ್ದರು.
ಯುವ ವಯಸ್ಕರಿಗೆ ಒಪಿಡಿ ಸಮಾಲೋಚನೆಗಳ ಸಂಖ್ಯೆಯು ಆತಂಕ, ಖಿನ್ನತೆ, ಗೇಮಿಂಗ್ ಮತ್ತು ಸಾಮಾಜಿಕ ಮಾಧ್ಯಮದ ವ್ಯಸನ ಮತ್ತು ಅಧ್ಯಯನದ ಮೇಲೆ ಕೇಂದ್ರೀಕರಿಸಲು ಮತ್ತು ಗಮನಹರಿಸಲು ಅಸಮರ್ಥತೆಗಾಗಿ ದ್ವಿಗುಣಗೊಂಡಿದೆ. ಹೀಗಾಗಿ ಮಕ್ಕಳ ಆರೋಗ್ಯದ ಮೇಲೆ ಗಮನ ಕೇಂದ್ರೀಕರಿಸುವಂತೆ ಪಾಲಕರಿಗೆ ಮನವಿ ಮಾಡಲಾಗುತ್ತಿದೆ ಎಂದು ಮಾನಸಿಕ ಆರೋಗ್ಯ ಮತ್ತು ಮನೋವೈದ್ಯಶಾಸ್ತ್ರದ ಹಿರಿಯ ಸಲಹೆಗಾರ ಡಾ ಸಂದೀಪ್ ವೋಹ್ರಾ ತಿಳಿಸಿದ್ದಾರೆ.