ಉಪ್ಪು ಅಡಿಗೆ ಮನೆಯಲ್ಲಿ ಮಾತ್ರ ರಾಜನಲ್ಲ. ಸೌಂದರ್ಯ ಮೀಮಾಂಸೆಯಲ್ಲೂ ಉಪ್ಪಿಗೆ ಮಹತ್ತರವಾದ ಸ್ಥಾನವಿದೆ. ದೇಹದ ಆರೋಗ್ಯಕ್ಕೂ ಸೌಂದರ್ಯಕ್ಕೂ ಉಪ್ಪನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿಯೋಣ ಬನ್ನಿ.
ಸ್ನಾನ ಮಾಡುವಾಗ ತಲೆಗೆ ಶ್ಯಾಂಪೂ ಅಥವಾ ಸೋಪನ್ನು ಬಳಸುವ ಬದಲು ಉಪ್ಪು ನೀರಿನಿಂದ ಸ್ನಾನ ಮಾಡಿ. ಇದರಿಂದ ತಲೆಯಲ್ಲಿರುವ ಕಜ್ಜಿ ತುರಿಕೆಗಳು ಕಡಿಮೆಯಾಗುತ್ತದೆ. ಅಲ್ಲದೆ ಹೊಟ್ಟಿನ ಸಮಸ್ಯೆಗಳು ದೂರವಾಗುತ್ತವೆ.
ಮೈಮೇಲೆ ಮೂಡುವ ಸಣ್ಣ ಗುಳ್ಳೆಗಳಿಗೆ, ಮುಖದ ಮೇಲೆ ಮೂಡುವ ಮಧ್ಯಮ ಗಾತ್ರದ ಮೊಡವೆಗಳಿಗೂ ಇದು ಹೇಳಿ ಮಾಡಿಸಿದ ಮದ್ದು. ಇದು ಚರ್ಮದ ಮೇಲಿರುವ ಕೊಳೆ, ಧೂಳನ್ನು ಸ್ವಚ್ಛೀಕರಿಸುತ್ತದೆ.
ಲಂಡನ್ ನಲ್ಲಿನ SBI ಬ್ಯಾಂಕಿಗೆ ಹೋದ ಯುವಕನಿಗೆ ಕಂಡಿದ್ದೇನು ಗೊತ್ತಾ…? ಜಾಲತಾಣಗಳಲ್ಲಿ ಹರಿದಾಡುತ್ತಿದೆ ಜೋಕ್ ಗಳ ಸುರಿಮಳೆ
ಉಪ್ಪನ್ನು ಬಿಸಿ ನೀರಿನಲ್ಲಿ ಹಾಕಿ ಸ್ನಾನ ಮಾಡುವುದರಿಂದ ಕೀಲು ನೋವು, ಮಂಡಿ ನೋವಿನಂತಹ ಸಮಸ್ಯೆಗಳು ದೂರವಾಗುತ್ತವೆ.
ಉಪ್ಪಿನ ಬಿಸಿ ನೀರು ನಮ್ಮ ಚರ್ಮದ ರಂಧ್ರಗಳನ್ನು ತೆರೆಯುವಂತೆ ಮಾಡಿ ಖನಿಜಾಂಶಗಳು ಈ ರಂಧ್ರಗಳ ಮುಖಾಂತರ ಒಳಹೋಗಿ ಅಲ್ಲಿರುವ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತವೆ. ಇದರಿಂದ ಬ್ಯಾಕ್ಟೀರಿಯಾಗಳು ನಿರ್ಮೂಲನೆಗೊಳ್ಳುತ್ತವೆ.