ಮುಂಬೈ: ನಟ ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡಲು ಸಿಧು ಮೂಸೆವಾಲಾ ಹತ್ಯೆಯ ಪ್ರಮುಖ ಆರೋಪಿ ಲಾರೆನ್ಸ್ ಬಿಷ್ಣೊಯ್ ಶಾರ್ಪ್ ಶೂಟರ್ ಒಬ್ಬನನ್ನು ನಿಯೋಜಿಸಿದ್ದ ಸಂಗತಿ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡುವ ಕೊನೆಕ್ಷಣದಲ್ಲಿ ಶಾರ್ಪ್ ಶೂಟರ್ ಹಿಂದೆ ಸರಿದಿದ್ದ ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ.
ಸಲ್ಮಾನ್ ಖಾನ್ ಪ್ರತಿದಿನ ಮನೆಯ ಬಳಿ ಸೈಕಲ್ ಸವಾರಿ ಮಾಡುತ್ತಾರೆ. ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಇರುವುದಿಲ್ಲ ಎನ್ನುವುದನ್ನು ಶಾರ್ಪ್ ಶೂಟರ್ ಗೆ ತಿಳಿಸಲಾಗಿತ್ತು. ಸಣ್ಣ ಗನ್ ಒಂದನ್ನು ಹಾಕಿ ಸ್ಟಿಕ್ ಕೇಸ್ ನಲ್ಲಿ ಇರಿಸಿಕೊಂಡು ಶಾರ್ಪ್ ಶೂಟರ್ ಸಲ್ಮಾನ್ ಖಾನ್ ಮನೆಯವರೆಗೂ ತಲುಪಿದ್ದ. ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡುವ ಕೊನೆ ಕ್ಷಣದಲ್ಲಿ ಪೊಲೀಸರಿಗೆ ಸಿಕ್ಕಿ ಬೀಳುವ ಭಯದಿಂದ ಹಿಂದೆ ಸರಿದಿದ್ದ ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ. ಪೋಲಿಸರು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.