ಮಮತೆ ಎಂಬ ಪದ ಕೇಳಿದರೆ ಎಂಥವರ ಮನಸ್ಸೂ ಮುದಗೊಳ್ಳುತ್ತದೆ. ಇನ್ನು ಅಂತಹ ಫೋಟೋ ನೋಡಿದರೆ ಕೇಳಬೇಕೆ ? ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ ಇಂತಹ ಫೋಟೋಗಳಿಗೇನೂ ಕೊರತೆ ಇಲ್ಲ. ಆದರೂ ಈ ಫೋಟೋ ವಿಶೇಷವಾದುದು. ಅದನ್ನು ನೋಡಿದರೆ, ಭಾರತೀಯ ಸೇನೆ, ಭಾರತೀಯ ಯೋಧರ ಮಮತೆಗೆ ಸರಿಸಾಟಿ ಇಲ್ಲ ಎಂದು ನಿಮಗನಿಸದೇ ಇರದು.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಾಂಘವಿ ಬುಧವಾರ ಈ ಫೋಟೋಗಳನ್ನು ಟ್ವೀಟ್ ಮಾಡಿ, ಭಾವನೆಗಳು ಮತ್ತು ಕರ್ತವ್ಯ ಜತೆ ಜತೆಯಾಗಿರುವ ಸಂದರ್ಭ…… ಭಾರತೀಯ ಸೇನೆಗೊಂದು ಸಲಾಂ ಎಂಬ ಶೀರ್ಷಿಕೆಯನ್ನೂ ಕೊಟ್ಟಿದ್ದಾರೆ. ಇದು, 2000ಕ್ಕೂ ಹೆಚ್ಚು ಸಲ ರೀಟ್ವೀಟ್ ಆಗಿದ್ದು, 20,000ಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ.
ಆಂಬ್ಯುಲೆನ್ಸ್ ಒಳಗೆ ಸೇನಾಧಿಕಾರಿ ಕುಳಿತಿರುವ ಚಿತ್ರ ಅದು. ಅಧಿಕಾರಿ ತನ್ನ ಕೈಯಲ್ಲಿ ಮಗುವನ್ನು ಹಿಡಿದು, ಆಹಾರವನ್ನು ಕೊಡುತ್ತಿರುವ ದೃಶ್ಯವಿದೆ. ಮತ್ತೊಬ್ಬ ಅಧಿಕಾರಿ ಕೈಯಲ್ಲಿ ಬಟ್ಟೆ ಹಿಡಿದು ನೆರವಿಗೆ ನಿಂತಿದ್ದರು. ಇದು ಹೃದಯಸ್ಪರ್ಶಿ ಚಿತ್ರವಾಗಿದ್ದು, ಮಾನವೀಯತೆಯ ಪ್ರತೀಕವಾಗಿ ಕಂಡಿದೆ.
ಸೇನಾ ಅಧಿಕಾರಿ ಮಾಡಿದ ಪ್ರಯತ್ನವನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದು, ತಮ್ಮ ಭಾವನೆಗಳನ್ನೂ ಹಂಚಿಕೊಂಡಿದ್ದಾರೆ. “ಮಾನವೀಯತೆಗಾಗಿ ಸಮರ್ಪಣಾ ಭಾವ ಮತ್ತು ಈ ಪವಿತ್ರ ಮಣ್ಣಿನ ಮೇಲಿನ ಅವರ ಭಕ್ತಿಗೆ ಹ್ಯಾಟ್ಸ್ ಆಫ್” ಎಂದು ಒಬ್ಬ ಟ್ವಿಟರ್ ಬಳಕೆದಾರ ಬರೆದಿದ್ದಾರೆ. ಮತ್ತೊಬ್ಬ, “ಸಾವಿರ ಪದಗಳ ಮೆಚ್ಚುಗೆಗೆ ಯೋಗ್ಯ ಚಿತ್ರ” ಎಂದಿದ್ದಾರೆ.