ಕಾರು ಖರೀದಿಸಬೇಕೆಂಬ ಬಯಕೆ ಬಹುತೇಕ ಎಲ್ಲರಲ್ಲೂ ಇರುತ್ತದೆ. ಆದರೆ ಈ ಕನಸು ಕೈಗೂಡುವುದು ಕೆಲವರಿಗೆ ಮಾತ್ರ. ಒಂದೊಮ್ಮೆ ಕಾರು ಖರೀದಿಸಿದರೂ ಅಂತವರು ಆದಷ್ಟು ಐಷಾರಾಮಿ ವಾಹನಗಳತ್ತ ಒಲವು ಹೊಂದಿರುತ್ತಾರೆ.
ಆದರೆ ಬೆಲೆಗಳ ಕಾರಣಕ್ಕೆ ಐಷಾರಾಮಿ ಕಾರುಗಳನ್ನು ಖರೀದಿಸಲು ಹಿಂದೇಟು ಹಾಕುತ್ತಾರೆ. ಅಂತವರಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ಐಷಾರಾಮಿ ಕಾರುಗಳ ಉತ್ಪಾದಕ ಕಂಪನಿ ಜರ್ಮನಿಯ ಪೋರ್ಷೆ ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರುಕಟ್ಟೆಯನ್ನು ಪ್ರವೇಶಿಸುವುದಾಗಿ ತಿಳಿಸಿದೆ.
‘ಪೋರ್ಷೆ ಅಪ್ರೂಡ್’ ಹೆಸರಿನಲ್ಲಿ ಬಳಸಿದ ಕಾರುಗಳ ಮಾರಾಟ ನಡೆಯಲಿದ್ದು, ಇದಕ್ಕೆ 12 ತಿಂಗಳುಗಳ ಕಾಂಪ್ರಹೆನ್ಸಿವ್ ವಾರಂಟಿ ಜೊತೆಗೆ 24ಗಂಟೆಗಳ ರೋಡ್ ಸೈಡ್ ಅಸಿಸ್ಟೆನ್ಸ್ ಇರಲಿದೆ ಎಂದು ಕಂಪನಿ ತಿಳಿಸಿದೆ.