ಬಲೂಚಿಸ್ತಾನ್, ಪಾಕಿಸ್ತಾನದ ಪರ್ವತ ಪ್ರದೇಶ, ಈ ಪ್ರದೇಶದಲ್ಲಿ ಒಂದಿಲ್ಲ ಒಂದು ಅವಘಡಗಳು ಸಂಭವಿಸುತ್ತಲೇ ಇರುತ್ತೆ. ಈಗ ಮತ್ತೆ ಅಂತಹದ್ದೇ ಒಂದು ಅವಘಡ ಸಂಭವಿಸಿದೆ. ನೂರಾರು ಅಡಿ ಕಂದಕಕ್ಕೆ ಪ್ಯಾಸೆಂಜರ್ ವ್ಯಾನ್ ಉರುಳಿ ಬಿದ್ದು ಕನಿಷ್ಠ 22 ಜನರು ದಾರುಣ ಸಾವನ್ನಪ್ಪಿದ್ದಾರೆ. ಅಷ್ಟೆ ಅಲ್ಲ ಒಂದು ಮಗುವಿಗೆ ಗಂಭೀರ ರೂಪದ ಗಾಯಗಳಾಗಿವೆ.
ಸುಮಾರು 23ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದ ಈ ವ್ಯಾನ್ ಲೋರಲೈನಿಂದ ಹೊರಟಿತ್ತು. ಝೋಬ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವೇಳೆ ಈ ವಾಹನವು ಕಿಲ್ಲಾ ಸೈಫುಲ್ಲಾ ಪ್ರದೇಶದ ಬಳಿ ಕಂದಕಕ್ಕೆ ಉರುಳಿ ಬಿದ್ದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಾಹನವು ಅಖ್ತರ್ಜೈ ಬಳಿ ಬೆಟ್ಟದ ತುದಿಯಿಂದ ಬಿದ್ದಿದ್ದು, ಅಪಘಾತದ ವಾಹನದಲ್ಲಿದ್ದ 22 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಹಫೀಜ್ ಮಹಮ್ಮದ್ ಖಾಸಿಮ್ ಹೇಳಿದ್ದಾರೆ. ಅಪಘಾತದಲ್ಲಿ ಅಪ್ರಾಪ್ತ ಬಾಲಕ ಗಾಯಗೊಂಡಿದ್ದು, ವೈದ್ಯಕೀಯ ಚಿಕಿತ್ಸೆಗಾಗಿ ಆತನನ್ನು ಕ್ವೆಟ್ವಾಗೆ ರವಾನಿಸಲಾಗಿದೆ. ಝೋಬ್ನಲ್ಲಿ 1,572 ಮೀಟರ್ಗಳಷ್ಟು ಎತ್ತರದಲ್ಲಿರುವ ಅಖ್ತರ್ಝೈ ಬಡಕಟ್ಟು ಪ್ರದೇಶವಾಗಿದೆ.