ಚರ್ಮದ ತ್ವಚೆ, ಮುಖದ ಕಾಂತಿಯನ್ನು ಕಾಪಾಡಲು ಮೊಡವೆಯಿಂದ ರಕ್ಷಿಸಲು ಆಯಾ ಕಾಲ, ಹವಾಮಾನಕ್ಕೆ ಸರಿಯಾದುದನ್ನೇ ಬಳಸಬೇಕಾಗುತ್ತದೆ. ಸಾವಿರಾರು ರೂಪಾಯಿ ಖರ್ಚು ಮಾಡುವ ಬದಲು ಮನೆಯಲ್ಲಿಯೇ ನೈಸರ್ಗಿಕ ವಸ್ತುಗಳನ್ನು ಬಳಕೆ ಮಾಡಿ ಮೊಡವೆಗೆ ಹೇಗೆ ಪರಿಹಾರ ಕಂಡುಕೊಳ್ಳಬಹುದು, ಎಂಬುದರ ಕುರಿತು ಇಲ್ಲಿದೆ ಸಲಹೆ.
ಮುಖದ ಮೇಲೆ ಸೌತೆಕಾಯಿಯ ರಸವನ್ನು ಲೇಪಿಸಿ, 15-20 ನಿಮಿಷಗಳು ಬಿಟ್ಟು ತೊಳೆಯಿರಿ. ಅದರೊಂದಿಗೆ ರೋಸ್ ವಾಟರ್, ನಿಂಬೆ ಹಣ್ಣಿನ ರಸ ಬೆರೆಸಿ ಮುಖಕ್ಕೆ ಹಚ್ಚಿದರೆ ಮೊಡವೆಗಳು ಕ್ರಮೇಣ ಮಾಯವಾಗುತ್ತವೆ.
ಗ್ರೀನ್ ಟೀ ಬ್ಯಾಗನ್ನು ಬಿಸಿ ನೀರಿನಲ್ಲಿ ಅರ್ಧ ಗಂಟೆಗಳ ಕಾಲ ನೆನೆಸಿಡಿ. ತಣ್ಣಗಾದ ಮೇಲೆ ಚರ್ಮಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ.
ಮೇಕಪ್, ಎಣ್ಣೆ ಚರ್ಮ, ಮುಖದಲ್ಲಿ ಬೆವರು ಕುಳಿತಿದ್ದು ಮಲಿನವಾಗಿರುವುದನ್ನು ತಡೆಯಲು, ದಿನನಿತ್ಯ ಮುಖವನ್ನು ತೊಳೆಯಿರಿ. ಮಲಗುವ ಮುನ್ನ ತ್ವಚೆಗೆ ಯಾವುದೇ ಕ್ರೀಮ್ ಹಚ್ಚದಿರಿ.