ಕಣ್ಕಟ್ಟು ಉಂಟುಮಾಡುವ ಚಿತ್ರಗಳು ಮತ್ತು ಒಗಟುಗಳು ಮನಸ್ಸಿಗೆ ಮುದ ನೀಡುತ್ತವೆ. ಇಂಟರ್ನೆಟ್ ಲೋಕದಲ್ಲಿರುವವರು ಇಂಥವುಗಳಿಂದ ಬಹುಬೇಗ ಆಕರ್ಷಿತರಾಗಿ ಬಿಡುತ್ತಾರೆ. ಆನ್ಲೈನ್ ವೀಕ್ಷಕರನ್ನು ಸಕ್ರಿಯವಾಗಿರಿಸುವುದಕ್ಕೆ ಇದೊಂದು ಆಸಕ್ತಿಕರ ವಿಚಾರವೂ ಹೌದು. ಸದ್ಯ ಆನ್ಲೈನ್ ಸಮುದಾಯವನ್ನು ಸೆಳೆದಿರುವ ಫೋಟೋ ಇದು. ಈ ಛಾಯಾಚಿತ್ರದಲ್ಲಿ ಎಷ್ಟು ಕಪ್ಪೆಗಳಿವೆ ಎಂಬುದನ್ನು ಪತ್ತೆ ಹಚ್ಚುವುದೇ ಸವಾಲು!
ಮರೆಯಾಗಿರುವುದು ಪ್ರಾಣಿಗಳಿಗೆ ಹೊಸದಲ್ಲ. ಕೆಲವಕ್ಕೆ ಇದು ಬದುಕುಳಿಯುವ ತಂತ್ರವೇ ಹೊರತು ಬೇರೇನೂ ಅಲ್ಲ. ಇನ್ನು ಕೆಲವಕ್ಕೆ ಸದ್ದಿಲ್ಲದೆ ಬೇಟೆಯಾಡುವುದಕ್ಕೆ ಇರುವ ತಂತ್ರ. ಈಗ ರೆಡ್ಡಿಟ್ನಲ್ಲಿರುವ ಈ ಫೋಟೋ ನೆಟ್ಟಿಗರನ್ನು ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಜಾಗತಿಕವಾಗಿ ಟ್ರೆಂಡ್ ಕೂಡ ಆಗಿದೆ.
ಹಿಡನ್ ಇಮೇಜಸ್ ಎಂಬ ರೆಡ್ಡಿಟ್ನ ಸಬ್ಗ್ರೂಪ್ ಈ ಫೋಟೋವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಕಾಡು ಪ್ರದೇಶದ ನೆಲದ ಮೇಲೆ ತರಗೆಲೆಗಳು, ಮುರಿದ ಮರದ ಪುಟ್ಟ ಪುಟ್ಟ ಕೊಂಬೆಗಳು, ಕಪ್ಪೆ ಕಾಣುತ್ತವೆ. ಇದಕ್ಕೆ ಪೂರಕವಾಗಿ ಓದುಗರಿಗೆ ಸವಾಲೊಡ್ಡುವ ಶೀರ್ಷಿಕೆ ಹೀಗಿದೆ- “ನೆಲದಲ್ಲಿ ಜೀವಂತಿಕೆ ಇದೆ”.
ಸೂಕ್ಷ್ಮವಾಗಿ ಗಮನಿಸಿದಾಗ, ಒಣಗಿದ ಎಲೆಗಳು ಮತ್ತು ತೊಗಟೆಯ ನಡುವೆ ಕೆಲವು ಕಪ್ಪೆಗಳು ಮರೆಯಾಗಿರುವುದು ಗೋಚರಿಸುತ್ತದೆ. ಆದರೆ ಚಿತ್ರದಲ್ಲಿ ಎಷ್ಟು ಕಪ್ಪೆಗಳನ್ನು ನೋಡಬಹುದು ಎಂಬ ಪ್ರಶ್ನೆ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಪೋಸ್ಟ್ನಲ್ಲಿ ಹೆಚ್ಚಿನವರು ಪ್ರತಿಕ್ರಿಯೆ ಹೀಗಿದೆ – ಒಂದೇ ನೋಟಕ್ಕೆ ಚಿತ್ರದಲ್ಲಿ ʼಜೀವಂತಿಕೆʼ ಹುಡುಕುವುದು ಕಷ್ಟ. ಚಿತ್ರ ಪೋಸ್ಟ್ ಮಾಡಿದವರು ಐದು ಕಪ್ಪೆ ಇದೆ ಎಂದಾಗ, ಅದನ್ನು ಹುಡುಕಾಡಲು ಎಲ್ಲರೂ ಪ್ರಯತ್ನಿಸಿದ್ದಾರೆ. ಕೆಲವರ ಕಣ್ಣಿಗೆ ಮೂರು, ಎರಡು ಹೀಗೆ ಕಪ್ಪೆಗಳು ಕಾಣಿಸಿವೆ. ನಿಮಗೂ ಏನಾದರೂ ಐದು ಕಪ್ಪೆಗಳು ಕಾಣಿಸುತ್ತಿವೆಯಾ ನೋಡಿ.
https://www.reddit.com/r/hiddenimages/comments/v52eff/the_ground_is_alive_how_many_can_you_see/?utm_term=1882961547&utm_medium=post_embed&utm_source=embed&utm_name=&utm_content=header