alex Certify ಪಾಸ್‌ಪೋರ್ಟ್ ನವೀಕರಿಸುವುದು ಹೇಗೆ ? ಇಲ್ಲಿದೆ ಉಪಯುಕ್ತ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಸ್‌ಪೋರ್ಟ್ ನವೀಕರಿಸುವುದು ಹೇಗೆ ? ಇಲ್ಲಿದೆ ಉಪಯುಕ್ತ ಮಾಹಿತಿ

ಪಾಸ್‌ಪೋರ್ಟ್ ಅವಧಿ ಶೀಘ್ರದಲ್ಲೇ ಮುಗಿಯುತ್ತಿದೆಯೇ ? ಸರಿ, ಚಿಂತಿಸಬೇಡಿ. ನೀವು ಅದನ್ನು ಸರಳವಾಗಿ ನವೀಕರಿಸಬಹುದು. ಪಾಸ್‌ಪೋರ್ಟ್‌ನ ಅವಧಿ ಮುಗಿದಿದ್ದರೆ, ಹತ್ತು ವರ್ಷಗಳ ಸಿಂಧುತ್ವವನ್ನು ಹೊಂದಿರುವ ದಾಖಲೆಗಳನ್ನು ಒದಗಿಸಿದರೆ ಸುಲಭವಾಗಿ ಅದನ್ನು ನವೀಕರಿಸಬಹುದು. ಪಾಸ್‌ಪೋರ್ಟ್‌ ನವೀಕರಿಸುವ ಇಚ್ಛೆಯುಳ್ಳವರು ಅಧಿಕೃತ ವೆಬ್‌ಸೈಟ್‌ನಲ್ಲಿ ಅಪಾಯಿಂಟ್‌ಮೆಂಟ್‌ ಕಾಯ್ದಿರಿಸಲು ಕೆಲವು ಕ್ರಮಗಳನ್ನು ಅನುಸರಿಸಬೇಕು.

ಇದಕ್ಕಾಗಿ, ವೆಬ್‌ಸೈಟ್‌ ಮೂಲಕ ಅಪಾಯಿಂಟ್‌ಮೆಂಟ್‌ ಕಾಯ್ದಿರಿಸಿದ ಬಳಿಕ, ಅಗತ್ಯವಿರುವ ದಾಖಲೆಗಳೊಂದಿಗೆ ಸಮೀಪದ ಅಂಚೆ ಕಚೇರಿಗೆ ಹೋಗಿ ಅವುಗಳನ್ನು ಸಲ್ಲಿಸಬೇಕು. ಆದ್ದರಿಂದ, ನವೀಕರಣ ಅಥವಾ ಮರು ವಿತರಣೆಗೆ ಅಪಾಯಿಂಟ್‌ಮೆಂಟ್‌ ಕಾಯ್ದಿರಿಸುವ ಮೊದಲು ಅಗತ್ಯ ದಾಖಲೆಗಳನ್ನು ಕ್ರೋಡೀಕರಿಸಿಟ್ಟುಕೊಳ್ಳಬೇಕು.

ಪಾಸ್‌ಪೋರ್ಟ್ ನವೀಕರಣದ ಹಂತಗಳು:

ಆನ್‌ಲೈನ್ ನೋಂದಣಿ:

ಹಂತ 1: ನೋಂದಣಿಗಾಗಿ, ಪಾಸ್‌ಪೋರ್ಟ್ ಸೇವಾ ವೆಬ್‌ಸೈಟ್‌ (www.passportindia.gov.in)ಗೆ ಲಾಗಿನ್ ಆಗಿ.

ಹಂತ 2: ಈಗಾಗಲೇ ಬಳಕೆದಾರರಾಗಿದ್ದರೆ ‘ಎಕ್ಸಿಸ್ಟಿಂಗ್ ಯೂಸರ್’ ಆಯ್ಕೆ ಮಾಡಿಕೊಂಡು ವೆಬ್‌ಸೈಟ್‌ಗೆ ಲಾಗಿನ್ ಆಗಬಹುದು.

ಹಂತ 3: ಹೊಸ ಬಳಕೆದಾರರಾದರೆ “‘New User? Register Now” ಕ್ಲಿಕ್‌ ಮಾಡಿಕೊಂಡು, ಅಲ್ಲಿ ನೋಂದಾಯಿಸಿ.

ಹಂತ 4: ನಿಮ್ಮ ಸಮೀಪದ ಮತ್ತು ಸುಲಭವಾಗಿ ತಲುಪಬಹುದಾದ ಪಾಸ್‌ಪೋರ್ಟ್ ಕಚೇರಿಯನ್ನು ಹುಡುಕಿ.

ಹಂತ 5: ನೋಂದಣಿ ಪ್ರಕ್ರಿಯೆಯು ಸಲೀಸಾಗಿ ಮುಂದುವರಿಯಲು ಮೂಲಭೂತ ವಿವರಗಳನ್ನು ಸರಿಯಾಗಿ ದಾಖಲಿಸಬೇಕು.

ಹಂತ 6: ಇಷ್ಟಾದ ಬಳಿಕ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ರಚಿಸಿ.

ಹಂತ 7: ನಂತರ ನಿಮ್ಮ ನೋಂದಾಯಿತ ಇಮೇಲ್ ಐಡಿಗೆ ದೃಢೀಕರಣ ಇಮೇಲ್ ತಲುಪುತ್ತದೆ.

ಹಂತ 8: ನೋಂದಾಯಿತ ಇಮೇಲ್ ಐಡಿಗೆ ಕಳುಹಿಸಲಾದ ಲಿಂಕ್ ಅನ್ನು ಕ್ಲಿಕ್‌ ಮಾಡಿ ಖಾತೆಯನ್ನು ಸಕ್ರಿಯಗೊಳಿಸಿ.

ಹಂತ 9: ಪಾಸ್‌ಪೋರ್ಟ್ ಖಾತೆಗೆ ಲಾಗ್ ಇನ್ ಮಾಡಿದ ನಂತರ, “Apply for Fresh Passport/ Reissue of Passport’” ಆಯ್ಕೆಮಾಡಿ.

ಭರ್ತಿ ಮಾಡುವ ನಮೂನೆ:

ಹಂತ 1: ಫಾರ್ಮ್ ಅನ್ನು PDF ಫಾರ್ಮ್ಯಾಟ್‌ನಲ್ಲಿ ಡೌನ್‌ಲೋಡ್ ಮಾಡಿ.

ಹಂತ 2: ಮುಂದೆ ಆನ್‌ಲೈನ್‌ನಲ್ಲಿ ಲಭ್ಯ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ನಿಮ್ಮ ಪಾಸ್‌ಪೋರ್ಟ್‌ನ ಪ್ರಸ್ತುತ ಸ್ಥಿತಿಯನ್ನು ನಮೂದಿಸಿ.

ಹಂತ 3: ಬಳಕೆದಾರರು ತಮ್ಮ ಸಂಗಾತಿಯ ವಿವರಗಳನ್ನೂ ನವೀಕರಿಸಬಹುದು.

ಹಂತ 4: ಹೆಸರು, ಸಂಪರ್ಕ ಸಂಖ್ಯೆ ಮತ್ತು ವಿಳಾಸದಂತಹ ಪೂರ್ಣ ವಿವರಗಳೊಂದಿಗೆ ಇಬ್ಬರು ಸ್ಥಳೀಯರನ್ನು ರೆಫರೆನ್ಸ್‌ ಆಗಿ ನೀಡಬೇಕು. ಪೊಲೀಸ್ ಪರಿಶೀಲನೆ ವೇಳೆ ವಿಳಾಸ ದೃಢೀಕರಿಸುವುದಕ್ಕೆ ಈ ಸ್ಥಳೀಯರನ್ನು ಸಂಪರ್ಕಿಸಬಹುದು.

ಹಂತ 5: ಫಾರ್ಮ್ ಅನ್ನು ಭರ್ತಿ ಮಾಡುವಾಗ, ನಗರ ಮತ್ತು ಗ್ರಾಮವನ್ನು ಒಂದೇ ಕ್ಲಿಕ್‌ ಮೂಲಕ ಮೌಲ್ಯೀಕರಿಸಬೇಕು. ಆ ಅರ್ಜಿಯನ್ನು ಸೇವ್‌ ಮಾಡಬೇಕು.

ಹಂತ 6: ಮುಂದೆ, ಡಾಕ್ಯುಮೆಂಟ್ ಅನ್ನು ಡೌನ್‌ಲೋಡ್ ಮಾಡಿದ ಅದೇ ಪುಟದಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ.

ಹಂತ 7: ಅಂತಿಮವಾಗಿ, ಆನ್‌ಲೈನ್ ಫಾರ್ಮ್‌ನಲ್ಲಿ ತನ್ನಿಂತಾನೇ ವಿವರಗಳು ನಮೂದಾಗುತ್ತವೆ.

ಸ್ಲಾಟ್ ಬುಕಿಂಗ್:

ಹಂತ 1: ‘Schedule Appointment’ ಎಂಬುದನ್ನು ಆಯ್ಕೆ ಮಾಡಬೇಕು.

ಹಂತ 2: ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಲಭ್ಯ ಸ್ಲಾಟ್‌ ಅನ್ನು ಆಯ್ಕೆ ಮಾಡಬೇಕು.

ಹಂತ 3: ಸ್ಲಾಟ್ ದೃಢೀಕರಿಸಿದ ನಂತರ, ಅಪಾಯಿಂಟ್‌ಮೆಂಟ್ ಸಿಕ್ಕುತ್ತದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...