ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬುದ್ಧಿಭ್ರಮಣೆಯಾಗಿದೆ ಎಂಬ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆಗೆ ತಿರುಗೇಟು ನೀಡಿರುವ ಸಿದ್ದರಾಮಯ್ಯ, ಬಿಜೆಪಿಯವರು ಮೊದಲು ಕೋಮುವಾದಿ ನಶೆಯಿಂದ ಹೊರಗೆ ಬರಬೇಕು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸಂವಿಧಾನ ವಿರೋಧಿಗಳಿಗೆ ಅಧಿಕಾರ ಕೊಟ್ಟಿರುವುದೇ ತಪ್ಪು. ಬಿಜೆಪಿಯವರಿಗೆ ಕೋಮುವಾದಿಯ ನಶೆ ತಲೆಗೆ ಹತ್ತಿಕೊಂಡಿದೆ. ಆ ನಶೆಯಿಂದ ಬಿಜೆಪಿಯವರು ಮೊದಲು ಹೊರಬರಬೇಕು ಎಂದು ತಿರುಗೇಟು ನೀಡಿದ್ದಾರೆ.
ದೇಶದ ಜನತೆಗೆ ಮತ್ತೊಂದು ಗುಡ್ ನ್ಯೂಸ್: ಸರ್ಕಾರಿ ಯೋಜನೆಗಳಿಗೆ ಕ್ರೆಡಿಟ್ ಲಿಂಕ್ಡ್ ಪೋರ್ಟಲ್ ಪ್ರಾರಂಭ
ಇದೇ ವೇಳೆ ಸಿದ್ದರಾಮಯ್ಯ ಹುಚ್ಚ ಎಂಬ ಮಾಜಿ ಸಚಿವ ಕೆ.ಎಸ್. ಈಸ್ವರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈಶ್ವರಪ್ಪ ಅವರಿಂದ ನಾನು ಪಾಠ ಕಲಿಯಬೇಕಿಲ್ಲ. ಈಶ್ವರಪ್ಪ ಯಾಕೆ ಮಂತ್ರಿ ಸ್ಥಾನ ಕಳೆದುಕೊಂಡರು ? ಭ್ರಷ್ಟಾಚಾರ ಮಾಡಿ ಈಗಾಗಲೇ ಸಚಿವ ಸ್ಥಾನ ಕಳೆದುಕೊಂಡಿದ್ದಾರಲ್ಲವೇ ? ಅಂತವರಿಂದ ನಾನು ಪಾಠ ಕಲಿಯಬೇಕಿಲ್ಲ ಎಂದರು.
ಇನ್ನು ಪಠ್ಯದ ವಿಚಾರದಲ್ಲಿ ಮೊಂಡಾಟ ಮಾಡಿದರೆ ಜನರೇ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಮಕ್ಕಳಿಗೆ ಜ್ಞಾನ ವಿಕಾಸ, ಮನೋವೈಜ್ಞಾನಿಕತೆ ಬೆಳೆಸಬೇಕು. ಅದನ್ನು ಬಿಟ್ಟು ಆರ್.ಎಸ್.ಎಸ್ ಬಗ್ಗೆ ಹೆಡ್ಗೆವಾರ್ ಮಾಡಿದ ಭಾಷಣ ನಮಗೆ ಬೇಕಾ? ಈ ವಿಚಾರವನ್ನು ಪಠ್ಯದಲ್ಲಿ ಸೇರಿಸುವ ಅಗತ್ಯವೇನಿದೆ? ಎಂದು ಪ್ರಶ್ನಿಸಿದರು.