ಪಾಂಡಿಚೇರಿ ಟಿ10 ಪಂದ್ಯಾವಳಿಯಲ್ಲಿ ಪ್ಯಾಟ್ರಿಯಾಟ್ಸ್ ಮತ್ತು ರಾಯಲ್ಸ್ ನಡುವಿನ ಪಂದ್ಯದಲ್ಲಿ ಭಾರತದ 15 ವರ್ಷದ ಬಾಲಕ ಕೃಷ್ಣ ಪಾಂಡೆ ಒಂದೇ ಓವರ್ನಲ್ಲಿ ಆರು ಸಿಕ್ಸರ್ ಸಿಡಿಸಿ ಕ್ರಿಕೆಟ್ ಪ್ರೇಮಿಗಳ ಗಮನಸೆಳೆದಿದ್ದಾರೆ.
ರವಿಶಾಸ್ತ್ರಿ ಯುವರಾಜ್ ಸಿಂಗ್, ಹರ್ಷಲ್ ಗಿಬ್ಸ್ ಮತ್ತು ಕೀರಾನ್ ಪೊಲಾರ್ಡ್ ಅವರಂತೆ ಒಂದೇ ಓವರ್ನಲ್ಲಿ ಆರು ಸಿಕ್ಸ್ ಸಿಡಿಸಿದ ಸಾಧಕರ ಪಟ್ಟಿಗೆ ಕೃಷ್ಣ ಪಾಂಡೆ ಹೆಸರು ಸೇರ್ಪಡೆಯಾಗಿದೆ. ರಾಯಲ್ಸ್ ತಂಡ 10 ಓವರ್ಗಳಲ್ಲಿ ಭರ್ಜರಿ 157 ರನ್ ಗಳಿಸಿ ಪೇಟ್ರಿಯಾಟ್ಸ್ ತಂಡಕ್ಕೆ 158 ರನ್ ಚೇಸ್ ಮಾಡಿ ಗೆಲ್ಲುವ ಸವಾಲೊಡ್ಡಿತ್ತು.
ಇದನ್ನು ಬೆನ್ನಟ್ಟಿದ್ದ ಪೇಟ್ರಿಯಾಟ್ಸ್ ತಂಡದ ವಿಕೆಟ್ಗಳು ಪತನವಾಗಿ ಸಂಕಷ್ಟದಲ್ಲಿದ್ದ ವೇಳೆ ಕೃಷ್ಣ ಪಾಂಡೆ ಕ್ರೀಸಿಗೆ ಇಳಿದಿದ್ದರು. ಪಂದ್ಯದ ಆರನೇ ಓವರ್ನಲ್ಲಿ ನಿತೀಶ್ ಠಾಕೂರ್ ಬೌಲಿಂಗ್ ಅನ್ನು ಚಿಂದಿ ಉಡಾಯಿಸಿದ ಪಾಂಡೆ ಈ ಆರು ಸಿಕ್ಸರ್ಗಳ ಸಾಧನೆ ಮಾಡಿದರು. ಪಾಂಡೆ ಒಂಟಿಯಾಗಿಯೇ ಪಂದ್ಯದ ದಿಶೆಯನ್ನೇ ಬದಲಿಸಿ ಬಿಟ್ಟರು. ಪೇಟ್ರಿಯಾಟಿಕ್ಸ್ ತಂಡದಲ್ಲಿ ಗೆಲುವಿನ ಆಸೆ ಚಿಗುರಿಸಿದರು.
ಆದರೆ, ಕೊನೆಯ ಓವರ್ನಲ್ಲಿ 19 ಎಸೆತಗಳಲ್ಲಿ 83 ರನ್ ಗಳಿಸಿದ ಪಾಂಡೆ ಔಟಾದರು. ಅವರ ಈ 83 ರನ್ಗಳಲ್ಲಿ 12 ಸಿಕ್ಸ್, ಎರಡು 4 ಇದ್ದವು. ಸ್ಟ್ರೈಕ್ ರೇಟ್ ಬರೋಬ್ಬರಿ 436.80 ಆಗಿತ್ತು. ಆದಾಗ್ಯೂ ಪೇಟ್ರಿಯಾಟ್ಸ್ ತಂಡ ನಾಲ್ಕು ರನ್ಗಳ ಸೋಲು ಕಂಡಿತು.