ಕೋವಿಡ್ ಬಳಿಕ ಮಾಸ್ಕ್ ದಿನ ಬಳಕೆಯಲ್ಲಿ ಅನೇಕರಿಗೆ ಅವಿಭಾಜ್ಯವಾಗಿದೆ. ಕೋವಿಡ್ ಲಸಿಕೆ ಪಡೆದು, ಇತ್ತೀಚೆಗೆ ನಮ್ಮ ನಡುವೆ ಕೋವಿಡ್ ತಗ್ಗಿದ ಬಳಿಕವೂ ಮಾಸ್ಕ್ ಬಳಸಬೇಕೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.
ಮುಂಬೈನಲ್ಲಿ ಕೋವಿಡ್ -19 ಪ್ರಕರಣ ಹಠಾತ್ ಹೆಚ್ಚಳವು ಮಾಸ್ಕ್ ಧರಿಸುವ ಅನಿವಾರ್ಯತೆಯನ್ನು ಮತ್ತೊಮ್ಮೆ ಹುಟ್ಟುಹಾಕಿದೆ.
ಜೂನ್ 2ರಂದು ರಾಜ್ಯ ಕೋವಿಡ್ -19 ಕಾರ್ಯಪಡೆಯೊಂದಿಗೆ ಸಭೆ ನಡೆಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ನಿರ್ಬಂಧ ಜಾರಿ ಮಾಡುವುದರಿಂದ ತಪ್ಪಿಸಬೇಕಾದರೆ ಮಾಸ್ಕ್ ಧರಿಸಲೇ ಬೇಕು ಎಂದು ಜನರಲ್ಲಿ ಕೇಳಿಕೊಂಡರು.
ಮಾಸ್ಕ್ ಧರಿಸುವುದು ಮುಂದುವರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ವ್ಯಾಕ್ಸಿನೇಷನ್ ಮಾಡುವ ಅಗತ್ಯವನ್ನು ಠಾಕ್ರೆ ಒತ್ತಿ ಹೇಳಿದ್ದಾರೆ.
ಮಕ್ಕಳ ಬಿಸಿಯೂಟದ ಹಣದಲ್ಲೂ ಗೋಲ್ ಮಾಲ್; ಮುಖ್ಯ ಶಿಕ್ಷಕಿ ಸಸ್ಪೆಂಡ್
ಮಹಾರಾಷ್ಟ್ರದಲ್ಲಿ ಕೇವಲ ಒಂದೂವರೆ ತಿಂಗಳಲ್ಲಿ ಸಕ್ರಿಯ ಪ್ರಕರಣಗಳು ಏಳು ಪಟ್ಟು ಹೆಚ್ಚಾಗಿದೆ. ಹೀಗಾಗಿ ಅಲ್ಲಿನ ಸರ್ಕಾರವು ಕೆಲವು ನಿಯಮಗಳನ್ನು ಕಡ್ಡಾಯವಾಗಿ ಜಾರಿ ಮಾಡುವ ಬದಲು ನಾಗರಿಕರು ತಮ್ಮದೇ ಆದ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ. ತಜ್ಞರು ಮಾಸ್ಕ್ ಧರಿಸಬೇಕೆಂಬುದರ ಪರವಾಗಿ ಅಭಿಪ್ರಾಯ ನೀಡುತ್ತಾರೆ.
ಮಾಹಿಮ್‌ನ ಎಸ್‌ಎಲ್ ರಹೇಜಾ ಆಸ್ಪತ್ರೆಯ ಕನ್ಸಲ್ಟೆಂಟ್ ಮತ್ತು ಕ್ರಿಟಿಕಲ್ ಕೇರ್ ಮುಖ್ಯಸ್ಥ ಡಾ. ಸಂಜಿತ್ ಸಸೀಧರನ್ ಪ್ರತಿಕ್ರಿಯೆ ನೀಡಿ, ವೃದ್ಧರು ಮತ್ತು ಕೊಮೊರ್ಬಿಡಿಟಿ ಇರುವವರು ಮಾಸ್ಕ್ ಧರಿಸುವುದನ್ನು ಪ್ರಾರಂಭಿಸಬೇಕು. ಜನರಲ್ಲಿ ಮಾಸ್ಕ್ ಧರಿಸುವುದರಿಂದ ದಣಿವು ಕಾಣಿಸಿಕೊಂಡರೂ ಈ ನಿಯಮ ಪಾಲನೆ ಮಾಡಬೇಕು ಎಂದು ಹೇಳಿದರು.
ಮಾಸ್ಕ್ ಹಾಕದೇ ಸೋಂಕು ವ್ಯಾಪಕವಾದರೆ ಹೊಸ ವೈರಲ್ ರೂಪಾಂತರಗಳ ಹೊರಹೊಮ್ಮುವಿಕೆಗೆ ಕಾರಣವಾಗಬಹುದು, ಇದು ಆಕ್ರಮಣಕಾರಿಯಾಗಲೂ ಬಹುದು. ಜನನಿಬಿಡ ಪ್ರದೇಶಕ್ಕೆ ಮಾಸ್ಕ್ ಹಾಕಿ ನಿಯಮ ಪಾಲನೆ ಮಾಡುವುದು ಹೆಚ್ಚು ಮುಖ್ಯವಾಗಿದೆ. ಇಲ್ಲದಿದ್ದರೆ ವೈರಸ್ ಹರಡಲು ಮತ್ತು ಅನೇಕ ಜನರಿಗೆ ಸೋಂಕು ತಗುಲಿಸಲು ಸುಲಭವಾಗುತ್ತದೆ ಎಂದು ಅವರು ಹೇಳಿದರು.
ಮುಲುಂಡ್‌ನ ಫೋರ್ಟಿಸ್ ಆಸ್ಪತ್ರೆಯ ಸಾಂಕ್ರಾಮಿಕ ರೋಗ ತಜ್ಞೆ ಡಾ ಅನಿತಾ ಮ್ಯಾಥ್ಯೂ ಕೂಡ ಮಾಸ್ಕ್‌ಗಳ ಬಳಕೆಯನ್ನು ಬಲವಾಗಿ ಪ್ರತಿಪಾದಿಸಿದ್ದಾರೆ.