ಆಧಾರ್‌ನ ನಕಲು ಪ್ರತಿಯನ್ನು ಯಾವುದೇ ಸಂಸ್ಥೆಯೊಂದಿಗೆ ಹಂಚಿಕೊಳ್ಳಬೇಡಿ. ಏಕೆಂದರೆ ಅದು ದುರುಪಯೋಗವಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಜನರಿಗೆ ಸಲಹೆ ನೀಡಿತ್ತು.
“ಹೋಟೆಲ್‌ಗಳು ಅಥವಾ ಫಿಲ್ಮ್ ಹಾಲ್‌ಗಳಂತಹ ಪರವಾನಗಿ ಪಡೆಯದ ಖಾಸಗಿ ಸಂಸ್ಥೆಗಳು ಆಧಾರ್ ಕಾರ್ಡ್‌ಗಳ ಪ್ರತಿಗಳನ್ನು ಸಂಗ್ರಹಿಸಲು ಅಥವಾ ಇರಿಸಿಕೊಳ್ಳುವುದಕ್ಕೆ ಅನುಮತಿ ಇಲ್ಲ” ಎಂದು ಅದು ಹೇಳಿದೆ.
ಆದರೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಈ ಎಚ್ಚರಿಕೆ ಸಂದೇಶವನ್ನು ನಂತರ ಹಿಂಪಡೆಯಿತು. ಇದು ತಪ್ಪಾದ ವ್ಯಾಖ್ಯಾನಕ್ಕೆ ಕಾರಣವಾಗಬಹುದು ಎಂದು ಅದು ಸಮಜಾಯಿಷಿ ನೀಡಿತು.
ದೇಶದ ಮೊದಲ ಡೀಲಕ್ಸ್ ರೈಲು ʼಡೆಕ್ಕನ್ ಕ್ವೀನ್ʼ ಗೆ ಈಗ 92 ವರ್ಷ
ಇದೀಗ ಹೊಸ ಹೇಳಿಕೆ ಪ್ರಕಾರ, ಆಧಾರ್ ವ್ಯವಸ್ಥೆಯು ಬಳಕೆದಾರರ ಗುರುತು ಮತ್ತು ಗೌಪ್ಯತೆಯನ್ನು ರಕ್ಷಿಸಲು ಸಾಕಷ್ಟು ವೈಶಿಷ್ಟ್ಯಗಳನ್ನು ಹೊಂದಿದೆ ಮತ್ತು ಬಳಕೆದಾರರಿಗೆ “ಸಾಮಾನ್ಯ ವಿವೇಕ”ದೊಂದಿಗೆ ಬಳಸಲು ಮಾತ್ರ ಸಲಹೆ ನೀಡಲಾಗಿದೆ.
ಆದ್ದರಿಂದ, ನಿಮ್ಮ ಡೇಟಾವನ್ನು ಮತ್ತಷ್ಟು ರಕ್ಷಿಸಲು ನೀವು ಅನುಸರಿಸಬಹುದಾದ ಕೆಲವು ಭದ್ರತಾ ಸಲಹೆಗಳು ಯಾವುವು? ಇಲ್ಲಿ ಓದಿ:
• ಬಳಕೆದಾರರು ತಮ್ಮ ಆಧಾರ್ ಕಾರ್ಡ್ ಅನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಅಥವಾ UIDAI ವೆಬ್‌ಸೈಟ್‌ನಿಂದ ಮಾತ್ರ ಡೌನ್‌ಲೋಡ್ ಮಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು. ಇ- ಆಧಾರ್ ಡೌನ್‌ಲೋಡ್ ಮಾಡಲು ಸಾರ್ವಜನಿಕ ಕಂಪ್ಯೂಟರ್ ಬಳಸುವುದನ್ನು ತಪ್ಪಿಸಬೇಕು.
• ಬಳಕೆದಾರರು ತಮ್ಮ ಆಧಾರ್ ಬಯೋಮೆಟ್ರಿಕ್ಸ್ ಅನ್ನು mAadhaar ಅಪ್ಲಿಕೇಶನ್ ಬಳಸಿ ಲಾಕ್ ಮಾಡಬಹುದು ಅಥವಾ ಲಿಂಕ್ ಅನ್ನು ಕ್ಲಿಕ್ ಮಾಡಿ: https://resident.uidai.gov.in/aadhaar-lockunlock ಯಾವುದೇ ಸಂಭವನೀಯ ದುರುಪಯೋಗ ತಡೆಯಲು ಆ ರೀತಿ ಮಾಡಬಹುದು.
ಆಧಾರ್ ಡೇಟಾವನ್ನು ಲಾಕ್ ಮಾಡಲು/ಅನ್‌ಲಾಕ್ ಮಾಡಲು ವಿಐಡಿ ಅಥವಾ ವರ್ಚುವಲ್ ಐಡಿ ಅಗತ್ಯವಿದೆ. ವಿಐಡಿ ಎಂಬುದು ಆಧಾರ್ ಸಂಖ್ಯೆಯೊಂದಿಗೆ ಮ್ಯಾಪ್ ಮಾಡಲಾದ ಹಿಂತೆಗೆದುಕೊಳ್ಳಬಹುದಾದ 16-ಅಂಕಿಯ ಯಾದೃಚ್ಛಿಕ ಸಂಖ್ಯೆಯಾಗಿದೆ ಮತ್ತು ಆಧಾರ್ ಸಹಾಯವಾಣಿ ಸಂಖ್ಯೆ 1947 ಗೆ SMS ಕಳುಹಿಸುವ ಮೂಲಕ ಹಿಂಪಡೆಯಬಹುದು.
• ಮಾಸ್ಕ್ ಮಾಡಿದ ಆಧಾರ್ ಬಳಕೆಯು ಆಧಾರ್ ಸಂಖ್ಯೆಯನ್ನು ಮರೆಮಾಚುತ್ತದೆ ಮತ್ತು ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕೆಗಳನ್ನು ಮಾತ್ರ ತೋರಿಸುತ್ತದೆ. ಇದಕ್ಕಾಗಿ https://myaadhaar.uidai.gov.in/genricDownloadAadhaar ಗೆ ಹೋಗಬಹುದು.
• ನವೀಕರಿಸಿದ ಮೊಬೈಲ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಸಿಂಕ್ ಮಾಡಿ UIDAI ವೆಬ್‌ಸೈಟ್‌ನಲ್ಲಿ ನವೀಕರಿಸಲಾಗಿದೆಯೇ ಎಂದು ಪರಿಶೀಲಿಸಬಹುದು.
• ನಿಮ್ಮ ಆಧಾರ್ ಅನ್ನು ಆಫ್‌ಲೈನ್‌ನಲ್ಲಿ ಪರಿಶೀಲಿಸಲು, ಇ- ಆಧಾರ್ ಅಥವಾ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರಾಯಿತು. ಆನ್‌ಲೈನ್‌ನಲ್ಲಿ ಪರಿಶೀಲಿಸಲು, ಲಿಂಕ್‌ನಲ್ಲಿ 12 ಅಂಕಿಯ ಆಧಾರ್ ಅನ್ನು ಈ ವಿಳಾಸದಲ್ಲಿ ನಮೂದಿಸಿ https://myaadhaar.uidai.gov.in/verifyAadhaar.