ಜಾರ್ನಲ್ಲಿ ತನ್ನ ʼಹೂಸುʼ ಮಾರಾಟ ಮಾಡಿ ಜಗತ್ತಿನ ಗಮನ ಸೆಳೆದ ಯೂಟ್ಯೂಬ್ ಇನ್ಫ್ಲ್ಯುಯೆನ್ಸರ್ ಸ್ಟೆಫನಿ ಮ್ಯಾಟೋ ಈಗ ನಿತ್ಯವೂ 4 ಲಕ್ಷ ರೂಪಾಯಿ ಗಳಿಸುವುದಕ್ಕಾಗಿ ಮತ್ತೊಂದು ವಿಲಕ್ಷಣ ದಾರಿಯನ್ನು ಕಂಡುಕೊಂಡಿದ್ಧಾಳೆ !
’90 ಡೇ ಫಿಯನ್ಸ್’ ಶೋನಲ್ಲಿ ಕಾಣಿಸಿಕೊಂಡಿರುವ ಮ್ಯಾಟೊ, ತನ್ನ ಸ್ತನದ ಬೆವರು ಮಾರಾಟಕ್ಕೆ ಪಟ್ಟಿ ಮಾಡಿದ್ದಾರೆ ಎಂದು LADbible ವರದಿ ಮಾಡಿದೆ.
5 ವರ್ಷದೊಳಗಿನ ಮಕ್ಕಳ ಪೋಷಕರಿಗೆ ಮುಖ್ಯ ಮಾಹಿತಿ: ಆಧಾರ್ ನೋಂದಣಿ ಅಭಿಯಾನ
31 ವರ್ಷದ ಸ್ವಘೋಷಿತ ‘ಫಾರ್ಟೆಪ್ರೆನಿಯರ್’ ಆನ್ಲೈನ್ನಲ್ಲಿ ತನ್ನ ʼಹೂಸುʼ ಮಾರಾಟ ಮಾಡುವ ಮೂಲಕ 1.4 ಕೋಟಿ ರೂ. ಗಳಿಸಿದ್ದಳು. ಇದಕ್ಕಾಗಿ ಆಕೆ ಹೂಸನ್ನು ಜಾಡಿಗಳಲ್ಲಿ ಶೇಖರಿಸಿ ಇಟ್ಟಿದ್ದಳು. ಪ್ರತಿ ಜಾರ್ಗೆ 74,000 ರೂ. ಬೆಲೆ ನಿಗದಿ ಮಾಡಿದ್ದಳು. ಬೇಡಿಕೆ ಪೂರೈಸುವುದಕ್ಕಾಗಿ ಆಕೆ ಹೆಚ್ಚು ಫೈಬರ್ ಇರುವ ಆಹಾರವನ್ನು ಸೇವಿಸುತ್ತಿದ್ದಳು, ಇವು ಹೊಟ್ಟೆಯಲ್ಲಿ ವಾಯು ಶೇಖರಣೆಗೆ ಸಹಕಾರಿ ಆಗಿದ್ದವು. ಆದರೆ ಇದರಿಂದ ಅನಾರೋಗ್ಯ ಉಂಟಾಗಿ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಈಗ ಆರೋಗ್ಯ ಚೇತರಿಸಿಕೊಂಡ ಬಳಿಕ ಮ್ಯಾಟೋ ತನ್ನ ಸ್ತನದ ಬೆವರು ಮಾರಾಟಕ್ಕೆ ಇಳಿದಿದ್ದಾಳೆ.
ಇದರ ಮೂಲಕ ನಿತ್ಯವೂ $ 5,000 (ಅಂದಾಜು ರೂ. 4 ಲಕ್ಷ) ವರೆಗೆ ಆದಾಯ ಗಳಿಸುತ್ತಿದ್ದಾಳೆ. ಸ್ತನದ ಬೆವರನ್ನು ಕೂಡ ಅಕೆ ಬಾಟಲಿಗಳಲ್ಲಿ ತುಂಬಿ, ಎಕ್ಸ್-ರೇಟೆಡ್ ವೆಬ್ಸೈಟ್ನಲ್ಲಿ ಮಾರಾಟಕ್ಕೆ ಇರಿಸಿದ್ದಾಳೆ. ದಿನಕ್ಕೆ 10 ಬಾಟಲಿಯ ಸ್ತನದ ಬೆವರು ಸಂಗ್ರಹವಾಗುತ್ತಿದ್ದು, ಪ್ರತಿ ಬಾಟಲಿಗೆ 500 ಡಾಲರ್ ನಿಗದಿ ಮಾಡಿದ್ದಾಳೆ ಎಂದು LADbible ವರದಿ ಮಾಡಿದೆ.