ಮಡಿಕೇರಿ: 0-5 ವರ್ಷದ ಮಕ್ಕಳ ಬಿ.ಆರ್.ಎನ್.(ಬರ್ತ್ ರಿಜಿಸ್ಟ್ರೇಷನ್ ನಂಬರ್) ನ್ನು ಉಪಯೋಗಿ ಸಿ.ಇ.ಎಲ್.ಸಿ.(ಚೈಲ್ಡ್ ಎನ್‍ರೋಲ್‍ಮೆಂಟ್ ಕ್ಲೈಂಟ್) ತಂತ್ರಾಂಶದಲ್ಲಿ ಆಧಾರ್ ನೋಂದಣಿ ಮಾಡುವ ಅಭಿಯಾನವನ್ನು ಜಿಲ್ಲಾಡಳಿತ ಹಮ್ಮಿಕೊಂಡಿದೆ.
ಈ ಸಂಬಂಧ ಪ್ರತಿ ತಾಲ್ಲೂಕಿಗೆ ತಲಾ ಒಂದರಂತೆ ಒಟ್ಟು 5 ಆಧಾರ್ ಮೊಬೈಲ್ ಆಪರೇಟರ್ ಗಳಿಗೆ ಬುಧವಾರ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಟ್ಯಾಬ್ ಒದಗಿಸಿದರು.
ಆಧಾರ್ ನೋಂದಣಿ ಮಾಡುವ ದಿನಾಂಕವನ್ನು ಗ್ರಾಮ ಪಂಚಾಯಿತಿ ಮತ್ತು ಅಂಗನವಾಡಿಗಳ ಮೂಲಕ ತಿಳಿಸಲಾಗುವುದು. ಸಾರ್ವಜನಿಕರು ಈ ಸೇವೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ತಿಳಿಸಿದ್ದಾರೆ.