ಅಪರಾಧ ಜಗತ್ತಿನಲ್ಲಿ ಒಂದೇ ಒಂದು ಸುಳಿವು ಸಿಕ್ಕರೂ ಸಾಕು, ಅಪರಾಧಿ ಎಲ್ಲೇ ಇದ್ದರೂ ಹುಡುಕಿ ತೆಗೆಯಬಹುದು ಅನ್ನೊದಕ್ಕೆ ಈ ಘಟನೆ ಬೆಸ್ಟ್ ಎಗ್ಸಾಂಪಲ್.
ಇದು ಮಧ್ಯಪ್ರದೇಶ ಇಂದೋರ್ನ ಬಾಣಗಂಗಾನಲ್ಲಿ ನಡೆದ ಘಟನೆ. ಇಲ್ಲಿ ಮಹಿಳೆಯೊಬ್ಬಳು ಫೇಸ್ಬುಕ್ಲ್ಲಿಫೋಟೋ ಒಂದನ್ನ ಅಪ್ಲೋಡ್ ಮಾಡಿದ್ದಾಳೆ. ಆಕೆ ಫೋಟೋ ಅಪ್ಲೋಡ್ ಮಾಡಿದ್ದ ಕೆಲವೇ ಕೆಲವು ನಿಮಿಷಗಳ ನಂತರ ಆಕೆಯ ಮಗನನ್ನ ಪೊಲೀಸರು ಕಂಬಿ ಹಿಂದೆ ಕಳುಹಿಸಿದ್ದಾರೆ.
ಅಸಲಿಗೆ ಆ ಮಹಿಳೆ ಫೋಟೋ ಅಪ್ಲೋಡ್ ಮಾಡಿದ್ದು ಮಗ ಉಡುಗೊರೆಯಾಗಿ ಕೊಟ್ಟಿದ್ದ ಮೊಬೈಲ್ನಿಂದ. ಅಸಲಿಗೆ ಆತ ಆ ಮೊಬೈಲ್ ಕದ್ದಿದ್ದ. ಅದು ಆಕೆಗೆ ಗೊತ್ತಿರಲಿಲ್ಲ. ಮೊಬೈಲ್ ಕಳೆದುಕೊಂಡಾಕ್ಷಣವೇ ಸಂಜಯ್, ಪೊಲೀಸರಿಗೆ ಮೊಬೈಲ್ ಕಳೆದು ಹೋಗಿರೋದರ ಬಗ್ಗೆ ದೂರು ನೀಡಿದ್ದ.
ಕೆಲವೇ ಕೆಲವು ದಿನಗಳ ಹಿಂದೆ ಸಂಜಯ್ ಹೊಸ ಮೊಬೈಲ್ನ್ನ ಖರೀದಿ ಮಾಡಿದ್ದರು. ಹೊಸ ಮೊಬೈಲ್ ಕಳೆದುಕೊಂಡ ನಂತರ ಸಂಜಯ್ ಪೊಲೀಸರಿಗೆ ಕಂಪ್ಲೆಂಟ್ ಮಾಡಿದ್ದರು. ಪೊಲೀಸರು ಕಳೆದುಹೋದ ಮೊಬೈಲ್ನ್ನ ಹುಡುಕುವ ಪ್ರಯತ್ನ ಮಾಡುತ್ತಿದ್ದರು.
ಆಗಲೇ ಆ ಮೊಬೈಲ್ನಿಂದ ಮಹಿಳೆಯೊಬ್ಬಳು, ಫೇಸ್ಬುಕ್ಲ್ಲಿ ಫೋಟೋ ಅಪ್ಲೋಡ್ ಮಾಡಿರೋ ಸುಳಿವು ಪೊಲೀಸರಿಗೆ ಸಿಕ್ಕಿದೆ. ತಕ್ಷಣವೇ ಪೊಲೀಸರು ಕಳ್ಳನ ಜಾಡು ಹಿಡಿದುಕೊಂಡು ಹೋಗಿ ಬಂಧಿಸಿದ್ದಾರೆ.
ಮೊದಲು ಮಹಿಳೆಯನ್ನ ವಿಚಾರಣೆಗೆ ಒಳಪಡಿಸಿದ ಪೊಲೀಸರು, ಕೊನೆಗೆ ಆ ಮಹಿಳೆಯ ಮಗನೇ ಮೊಬೈಲ್ ಕದ್ದಿರೋದು ಗೊತ್ತಾಗಿದೆ. ಅಸಲಿಗೆ ಆ ಮಹಿಳೆಯ ಮಗ ಜಾಫರ್ ಅಲಿಯಾಸ್ ಶಾಬಾದ್ ಆ ಮೊಬೈಲ್ನ್ನ ಅಮ್ಮನಿಗೆ ಉಡುಗೊರೆಯಾಗಿ ಕೊಟ್ಟಿದ್ದ.
ಮಗ ಮೊಬೈಲ್ ಗಿಫ್ಟ್ ಕೊಟ್ಟ ಖುಷಿಯಲ್ಲಿ ಹಳೆಯ ಯಾವುದೇ ಐಡಿಗಳನ್ನ ಡಿಲೀಟ್ ಮಾಡದೇ ಆಕೆ ನೇರವಾಗಿ ತನ್ನ ಫೋಟೋ ಫೇಸ್ಬುಕ್ಲ್ಲಿಅಪ್ಲೋಡ್ ಮಾಡಿದ್ದಾಳೆ. ಇದೊಂದೇ ಸುಳಿವು ಕಳ್ಳನನ್ನ ಹುಡುಕುವುದಕ್ಕೆ ಸಹಾಯವಾಗಿದೆ.