alex Certify ರುಚಿಕರವಾದ ಎಗ್ ಕುರ್ಮಾ ತಯಾರಿಸುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರುಚಿಕರವಾದ ಎಗ್ ಕುರ್ಮಾ ತಯಾರಿಸುವ ವಿಧಾನ

Egg Masala Recipe - Ruchi Recipesಎಗ್ ಎಂದರೆ ಎಂತವರ ಬಾಯಲ್ಲೂ ನೀರೂರುತ್ತದೆ ಹಾಗೂ ಅದರಲ್ಲಿ ನಾನಾ ರೀತಿಯ ತಿನಿಸುಗಳನ್ನು ಮಾಡಬಹುದು ಅದರಲ್ಲಿ ಒಂದು ಈ ಎಗ್ ಕುರ್ಮಾ.

ಬೇಕಾಗುವ ಪದಾರ್ಥಗಳು: ಮೊಟ್ಟೆ 6, ಹಾಲು ಅರ್ಧ ಕಪ್, ಗೋಡಂಬಿ 8, ಹಸಿ ಮೆಣಸಿನಕಾಯಿ 8, ಬೆಳ್ಳುಳ್ಳಿ ಎಸಳು 6, ಕೊತ್ತಂಬರಿ ಪುಡಿ 3 ಚಮಚ, ಅರಿಶಿನ ಪುಡಿ, ತುರಿದ ತೆಂಗಿನಕಾಯಿ ಸ್ವಲ್ಪ, ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ, ಶುಂಠಿ, ತುಪ್ಪ 3 ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಸ್ವಲ್ಪ ತುರಿದ ತೆಂಗಿನಕಾಯಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಚಕ್ಕೆ-ಲವಂಗ, ಬೆಳ್ಳುಳ್ಳಿ, ಶುಂಠಿ, ಅರಿಶಿನಪುಡಿ ಒಟ್ಟಿಗೆ ಹಾಕಿ ನುಣ್ಣಗೆ ರುಬ್ಬಿ, ಈರುಳ್ಳಿಯನ್ನು ಸಣ್ಣದಾಗಿ ತೆಳುವಾಗಿ ಕತ್ತರಿಸಬೇಕು. ಆ ನಂತರ ಮೊಟ್ಟೆಯನ್ನು ಒಡೆದು ಬಿಳಿ ಭಾಗವನ್ನು ಒಂದು ಬಟ್ಟಲಿನಲ್ಲಿ ಹಾಕಿ. ಹಳದಿಯನ್ನು ಮತ್ತೊಂದು ಬಟ್ಟಲಿನಲ್ಲಿ ಹಾಕಿಡಿ. ಬಳಿಕ ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣವನ್ನು ಚೆನ್ನಾಗಿ ಕದಡಬೇಕು. ಕದಡಿದ ಮೊಟ್ಟೆಯನ್ನು ಪಾತ್ರೆಯಲ್ಲಿರಿಸಿ ಆ ನಂತರ ದೊಡ್ಡ ಪಾತ್ರೆಯೊಂದರಲ್ಲಿ ಅರ್ಧದಷ್ಟು ನೀರು ಹಾಕಿ ಬಿಸಿ ಮಾಡಬೇಕು. ಮೊಟ್ಟೆ ಬೆಂದ ಮೇಲೆ ಅದನ್ನು ತೆಗೆದು ಚೌಕಾಕಾರವಾಗಿ ಕತ್ತರಿಸಬೇಕು.

ಕುರ್ಮಾ ಮಾಡಲು ಪಾತ್ರೆಯನ್ನು ಉರಿಯಲ್ಲಿಟ್ಟು ತುಪ್ಪ ಹಾಕಬೇಕು. ಆ ನಂತರ ಗೋಡಂಬಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ಬಳಿಕ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೂ ಹುರಿದು ಮಸಾಲೆಯನ್ನು ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಡಿಮೆ ಉರಿಯಲ್ಲಿ ಬಿಸಿ ಮಾಡಬೇಕು, ತುಪ್ಪ, ಮಿಶ್ರಣದ ಮೇಲೆ ಕಾಣಿಸಿದಾಗ ಸ್ವಲ್ಪ ನೀರು ಹಾಕಿ ಕುದಿ ನಂತರ ಕತ್ತರಿಸಿದ ಮೊಟ್ಟೆ ತುಂಡುಗಳನ್ನು ಹಾಕಿ ಮಿಶ್ರಣ ಗಟ್ಟಿಯಾಗುವವರೆಗೂ ಕುದಿಸಬೇಕು. ಇದನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಎಗ್ ಕುರ್ಮಾ ಸವಿಯಲು ಸಿಧ್ಧ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...