ಜಿರಾಫೆ ಅತ್ಯಂತ ಎತ್ತರದ ಪ್ರಾಣಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಇದು ಸುಮಾರು 15 ರಿಂದ 20 ಅಡಿಗಳಷ್ಟು ಎತ್ತರವಿರುತ್ತದೆ. ಇದೇ ರೀತಿಯ ಜಿರಾಫೆ ಎಲ್ಲರನ್ನೂ ಆಕರ್ಷಿಸುತ್ತಿದೆ.
ಅದು ನಿಜವಾದ ಜಿರಾಫೆಯಲ್ಲ. ಸಂಪೂರ್ಣ ಚಾಕೊಲೇಟ್ ನಿಂದ ತಯಾರಿಸಲಾಗಿರುವ ಜಿರಾಫೆ ಇದು ! ಇದರ ಎತ್ತರ ಬರೋಬ್ಬರಿ 8 ಅಡಿ. ಇದರ ಪಕ್ಕದಲ್ಲಿ ನಿಂತರೆ ನೀವು ಕುಳ್ಳರಾಗಿ ಕಾಣುತ್ತೀರಿ.
BIG NEWS: ರಣಾಂಗಣವಾದ ರೈತರ ಮುಖಂಡರ ಸಭೆ; ರಾಕೇಶ್ ಟಿಕಾಯತ್ ಮುಖಕ್ಕೆ ಮಸಿ ಬಳಿದು ಹಲ್ಲೆ
ಪೇಸ್ಟ್ರಿ ಕಲಾವಿದ ಅಮೌರಿ ಗ್ಯುಚೋನ್ ಎಂಬುವರು ಈ ಚಾಕೊಲೇಟ್ ಜಿರಾಫೆಯನ್ನು ತಯಾರಿಸಿದ್ದು, ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದುವರೆಗಿನ ಅತ್ಯಂತ ಎತ್ತರ ಮತ್ತು ದೊಡ್ಡದಾದ ಚಾಕೊಲೇಟ್ ಜಿರಾಫೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಚಾಕೊಲೇಟ್ ಜಿರಾಫೆಯನ್ನು ತಯಾರು ಮಾಡುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವಿಡಿಯೋ ಮಾಡಲಾಗಿದ್ದು, ಈ ವಿಡಿಯೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದೆ. ಇದು 8.3 ಅಡಿ ಎತ್ತರವಿದೆ.
ಈ ಪ್ರಕ್ರಿಯೆ ಬಗ್ಗೆ ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿರುವ ಗ್ಯುಚೋನ್, ಈ ಜಿರಾಫೆಯ ಕಲಾಕೃತಿಯನ್ನು ತಯಾರಿಸಲು ಸತತ 7 ದಿನಗಳು ಬೇಕಾದವು. ಇದಕ್ಕೆ ಸಂಪೂರ್ಣವಾಗಿ ಚಾಕೊಲೇಟ್ ಅನ್ನು ಬಳಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಚಾಕೊಲೇಟ್ ಜಿರಾಫೆ ವಿಡಿಯೋವನ್ನು 80 ಮಿಲಿಯನ್ ಗೂ ಅಧಿಕ ಜನರು ವೀಕ್ಷಿಸಿದ್ದಾರೆ. ಈ ಜಿರಾಫೆಯ ಪಕ್ಕದಲ್ಲೊಂದು ದೊಡ್ಡ ಮರವಿದ್ದರೆ ಇನ್ನೂ ಚೆನ್ನಾಗಿರುತ್ತದೆ ಎಂದು ಕೆಲವು ನೆಟ್ಟಿಗರು ಉದ್ಘರಿಸಿದ್ದಾರೆ.