
ಗುಂಡಿಗೆಗೆ ಬುಲೆಟ್ ಹೊಡೆದರೆ, ಎದೆಗೆ ಚಾಕುವಿನಿಂದ ಚುಚ್ಚಿದರೆ ಬದುಕುಳಿದಿರೋದನ್ನ ನಾವು ಸಿನೆಮಾಗಳಲ್ಲಿ ನೋಡಿದ್ದೇ ಹೆಚ್ಚು. ಇದೆಲ್ಲ ನಿಜ ಜೀವನದಲ್ಲಿ ನಡೆಯೋದು ಅಸಾಧ್ಯ ಅಂತ ಅಂದ್ಕೊಂಡು ಬಿಡ್ತೇವೆ. ಆದ್ರೆ ಇಲ್ಲಿ ನೋಡಿ ನಾಯಿ ಮರಿಯ ಕುತ್ತಿಗೆಯೊಳಗೆ ಬಾಣವೊಂದು ಚುಚ್ಚಿದೆ. ಆ ಬಾಣ ಚುಚ್ಚಿದ್ದರೂ ನಾಯಿ ಮರಿ ಜೀವಕ್ಕೆ ಮಾತ್ರ ಅಪಾಯವಾಗಿರಲಿಲ್ಲ.
ಬಾಣ ಚುಚ್ಚಿರೋದ್ರಿಂದ ನಾಯಿ ಮರಿಗೆ ಗಂಭೀರ ಗಾಯವಾಗಿದೆ. ಇದನ್ನ ನೋಡಿದ ಮಹಿಳೆ ಪೊಲೀಸರಿಗೆ ಕರೆ ಮಾಡಿ ಹೇಳಿದ್ದಾರೆ. ನಾಯಿ ಮರಿ ನೋವಿನಿಂದ ಒಂದೇ ಸಮನೆ ಕೂಗುತ್ತಿತ್ತು. ಹತ್ತಿರ ಹೋಗಿ ನೋಡಿದಾಗಲೇ ಆಕೆಗೂ ಗೊತ್ತಾಗಿದ್ದು, ಯಾರೋ ದುಷ್ಕರ್ಮಿಗಳು ನಾಯಿಗೆ ಬಾಣದಿಂದ ಹೊಡೆದಿದ್ದಾರೆ ಅಂತ. ಈಗ ನಾಯಿ ಮರಿಗೆ ಚುಚ್ಚಿದ್ದ ಬಾಣವನ್ನು ವೈದ್ಯರು ಚಿಕಿತ್ಸೆ ಕೊಟ್ಟು ತೆಗೆದಿದ್ದಾರೆ. ಸದ್ಯಕ್ಕೆ ನಾಯಿ ಮರಿ ಜೀವಾಪಾಯದಿಂದ ಪಾರಾಗಿದೆ.
ವೈಫೈ ಇಲ್ಲದೆ ಪರಸ್ಪರ ಮಾತನಾಡಲೆಂದೇ ಇರುವ ಕೆಫೆ ಇದು…!
ಈ ಘಟನೆ ನಡೆದಿರೋದು ಅಮೆರಿಕಾದ ದಕ್ಷಿಣ ಕೆರೊಲಿನಾ ಪ್ರದೇಶದಲ್ಲಿ. ಮೂಕ ಪ್ರಾಣಿಯ ಮೇಲೆ ಈ ರೀತಿ ಪೌರುಷ ತೋರಿಸಿರೋ ದುಷ್ಟರಿಗೆ ಶಿಕ್ಷೆಯಾಗಬೇಕು ಅಂತ ಸ್ಥಳೀಯರು ಪೊಲೀಸರಿಗೆ ಕೊಟ್ಟಿರೋ ದೂರಿನಲ್ಲಿ ಹೇಳಿದ್ದಾರೆ.