alex Certify ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದ ಪಾಪಿ ಮಡದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದ ಪಾಪಿ ಮಡದಿ

ದೆಹಲಿ: ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನು ಸುಪಾರಿ ಕಿಲ್ಲರ್ ನಿಂದ ಹತ್ಯೆ ಮಾಡಿಸಿರುವ ಘಟನೆ ದೆಹಲಿಯ ದರಿಯಾಗಂಜ್‌ನಲ್ಲಿ ನಡೆದಿದೆ.

ಮೇ 17ರಂದು ಈ ಘಟನೆ ನಡೆದಿದ್ದು, ಸುಪಾರಿ ಕಿಲ್ಲರ್ ಗೆ 6 ಲಕ್ಷ ರೂ. ನೀಡಿ ಹಂತಕಿ ಪತ್ನಿ ಈ ಕೃತ್ಯವೆಸಗಿದ್ದಾಳೆ. 25 ವರ್ಷದಿಂದ ಸಂಸಾರ ನಡೆಸುತ್ತಿದ್ದ ಮಹಿಳೆ ತನ್ನ ಪತಿಯನ್ನೇ ಹತ್ಯೆಗೈದಿದ್ದಾಳೆ. ನಲವತ್ತು ವರ್ಷದ ಝೀಬಾ ಖುರೇಷಿ ತನ್ನ ಪ್ರಿಯಕರ ಶೋಯೆಬ್ (29) ನನ್ನು ವಿವಾಹವಾಗಲು ಬಯಸಿದ್ದಳು. ಹೀಗಾಗಿ ಪತಿ ಮೊಯಿನುದ್ದೀನ್ ಖುರೇಷಿಯ ಕೊಲೆಗೆ ಸಂಚು ರೂಪಿಸಿದ್ದಳು.

ಆರೋಪಿ ಪತ್ನಿ ಝೀಬಾ ಖುರೇಷಿ ತನ್ನ ಗಂಡನ ಕುಡಿತದ ಚಟಕ್ಕೆ ಬೇಸತ್ತು ಹೋಗಿದ್ದಳು. ಖುರೇಷಿ ಅತಿಯಾಗಿ ಮದ್ಯಪಾನ ಮಾಡುತ್ತಿದ್ದುದಲ್ಲದೆ ಗಾಳಿಪಟ ಹಾರಿಸುವುದರಲ್ಲಿ ಸಮಯ ಕಳೆಯುತ್ತಿದ್ದರು. ಎರಡು ವರ್ಷಗಳ ಹಿಂದೆ, ಝೀಬಾಗೆ ಫೇಸ್‌ಬುಕ್‌ನಲ್ಲಿ ಮೀರತ್‌ನ ಉದ್ಯಮಿ ಶೋಯೆಬ್‌ನ ಪರಿಚಯವಾಗಿದೆ. ಅವನನ್ನು ಪ್ರೀತಿಸುತ್ತಿದ್ದ ಝೀಬಾ ಮದುವೆಯಾಗಲು ಬಯಸಿದ್ದಳು. ಕೊನೆಗೆ ತನ್ನ ಪತಿಯನ್ನು ಕೊಲ್ಲಲು ಶೋಯೆಬ್‌ಗೆ ಪ್ರಚೋದನೆ ನೀಡಿದ್ದಾಳೆ.

ಸುಪಾರಿ ಕಿಲ್ಲರ್ ಗೆ ಆರು ಲಕ್ಷ ರೂ. ಕೊಟ್ಟು ಹತ್ಯೆಗೆ ಇವರಿಬ್ಬರೂ ಸಂಚು ರೂಪಿಸಿದ್ದಾರೆ. ಅದರಂತೆ ಮೇ 17 ರಂದು ರಾತ್ರಿ 10 ಗಂಟೆ ಸುಮಾರಿಗೆ ಸುಪಾರಿ ಕಿಲ್ಲರ್ಸ್ ಮೊಯಿನುದ್ದೀನ್ ಮೇಲೆ ಗುಂಡು ಹಾರಿಸಿ ಬೈಕ್ ನಲ್ಲಿ ಪರಾರಿಯಾಗಿದ್ದರು. ಮೊಯಿನುದ್ದೀನ್ ಸಹೋದರ ರುಕ್ನುದ್ದೀನ್ ಪೊಲೀಸರಿಗೆ ದೂರು ನೀಡಿದಾಗ ವಿಷಯ ಬೆಳಕಿಗೆ ಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...