ಹಾಸನ: ಹಳೇಬೀಡಿನಲ್ಲಿ ಅಪ್ರಾಪ್ತ ಬಾಲಕ ದ್ವಿಚಕ್ರ ವಾಹನ ಚಾಲನೆ ಮಾಡಿದ ಘಟನೆ ನಡೆದಿದೆ. ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಹಳೇಬೀಡಿನಲ್ಲಿ ಘಟನೆ ನಡೆದಿದ್ದು, ವಾಹನ ಮಾಲೀಕನಿಗೆ 20 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
ಬೇಲೂರು ಜೆಎಂಎಫ್ಸಿ ನ್ಯಾಯಾಲಯ ಬೈಕ್ ಮಾಲೀಕನಿಗೆ 20 ಸಾವಿರ ರೂಪಾಯಿ ದಂಡ ವಿಧಿಸಿದೆ. ಪೊಲೀಸ್ ಜೀಪ್ ಎದುರು ಮೇ 6 ರಂದು ಅತಿವೇಗವಾಗಿ ಅಪ್ರಾಪ್ತ ಬಾಲಕ ಬೈಕ್ ಚಾಲನೆ ಮಾಡಿದ್ದ. ಹೆಲ್ಮೆಟ್ ಧರಿಸದೆ ಅಜಾಗರೂಕತೆಯಿಂದ ಬೈಕ್ ಓಡಿಸಿದ್ದ.
ಬಾಲಕನಿಗೆ ಬೈಕ್ ಕೊಟ್ಟಿದ್ದ ಮಾಲೀಕ ಹಿಂಬದಿ ಸೀಟಿನಲ್ಲಿ ಕುಳಿತುಕೊಂಡಿದ್ದರು. ದಾಖಲೆ ಪರಿಶೀಲನೆಯ ವೇಳೆಯಲ್ಲಿ ಲೈಸೆನ್ಸ್ ಮತ್ತು ವಿಮೆ ಇಲ್ಲದಿರುವುದು ಪತ್ತೆಯಾಗಿತ್ತು. ಬೈಕ್ ಮಾಲೀಕನಿಗೆ ನ್ಯಾಯಾಲಯ 20 ಸಾವಿರ ರೂಪಾಯಿ ದಂಡ ವಿಧಿಸಿದೆ.