alex Certify ಸದನದಲ್ಲಿ ಅಖಿಲೇಶ್​ ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳಲು ಒಪ್ಪದ ಶಿವಪಾಲ್ ಯಾದವ್: ಮತ್ತೆ ಭುಗಿಲೆದ್ದ ಚಿಕ್ಕಪ್ಪನ ಅಸಮಾಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸದನದಲ್ಲಿ ಅಖಿಲೇಶ್​ ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳಲು ಒಪ್ಪದ ಶಿವಪಾಲ್ ಯಾದವ್: ಮತ್ತೆ ಭುಗಿಲೆದ್ದ ಚಿಕ್ಕಪ್ಪನ ಅಸಮಾಧಾನ

ಚಿಕ್ಕಪ್ಪ ಶಿವಪಾಲ್ ಯಾದವ್ ಮತ್ತು ಅವರ ಸಹೋದರನ ಪುತ್ರ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖೀಲೇಶ್ ಯಾದವ್ ನಡುವೆ ನಡೆಯುತ್ತಿರೋ ಕೋಲ್ಡ್​ವಾರ್​ ಆಗಾಗ ಜಗಜ್ಜಾಹಿರಾಗ್ತಾನೇ ಇರುತ್ತೆ. ಈಗ ಚಿಕ್ಕಪ್ಪ ಮತ್ತು ಅಖಿಲೇಶ್ ನಡುವೆ ಎಷ್ಟು ಮನಸ್ತಾಪ ಉಂಟಾಗಿದೆ ಅಂದ್ರೆ ಒಬ್ಬರ ನೆರಳು ಇನ್ನೊಬ್ಬರಿಗೆ ಕಂಡರೆನೇ ಆಗ್ತಿಲ್ಲ. ‌

ಈಗ ಶಿವಪಾಲ್ ಯಾದವ್ ಅವರು ಇನ್ನು ಮುಂದೆ ಸದನದಲ್ಲಿ ಎಸ್ಪಿ ಶಾಸಕರೊಂದಿಗೆ ಕುಳಿತುಕೊಳ್ಳಲ್ಲ ಅಂತ ಕಡ್ಡಿ ಮುರಿದಂತೆ ಹೇಳಿದ್ದಾರೆ. ಈ ಕುರಿತು ವಿಧಾನಸಭಾಧ್ಯಕ್ಷ ಸತೀಶ್​​ ಮಹಾನ್ ಅವರಿಗೂ ಪತ್ರ ಬರೆದು ತಿಳಿಸಿದ್ದಾರೆ. ಅದೇ ಪತ್ರದಲ್ಲಿ ತಾವು ಕುಳಿತುಕೊಳ್ಳುವ ಸ್ಥಾನವನ್ನ ಬೇರೆ ಕಡೆಗೆ ಬದಲಾಯಿಸುವಂತೆಯೂ ಒತ್ತಾಯಿಸಿದ್ದಾರೆ. ಹಿರಿಯ ಸದಸ್ಯ ಅನ್ನುವ ಆಧಾರದ ಮೇಲೆ ತಾನು ಎಲ್ಲಿ ಕುಳಿತುಕೊಳ್ಳಬೇಕು ಅನ್ನೋದನ್ನ ನಿರ್ಧರಿಸಬೇಕು ಅನ್ನೊದು ಪತ್ರದಲ್ಲಿ ಉಲ್ಲೇಖವಾಗಿದೆ.

ವಾಹನ ಸವಾರಿಗೆ ಮತ್ತೊಂದು ಬಿಗ್ ಶಾಕ್: ಜೂನ್ 1 ರಿಂದ ಏರಿಕೆಯಾಗಲಿದೆ ಥರ್ಡ್ ಪಾರ್ಟಿ ವಿಮೆ ಪ್ರೀಮಿಯಂ ದರ

67 ವರ್ಷದ ಶಿವಪಾಲ್ ಯಾದವ್ ಅವರು ಸೈಕಲ್ ಚಿಹ್ನೆಯ ಮೂಲಕ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. ಈಗ ಅವರು ಜಸ್ವಂತ್ ನಗರ ಕ್ಷೇತ್ರದ ಶಾಸಕರಾಗಿದ್ದಾರೆ. ವರ್ಷಗಳ ಹಿಂದಷ್ಟೆ ಅಖೀಲೇಶ್ ಜೊತೆ ಉಂಟಾದ ಮನಸ್ತಾಪದಿಂದಾಗಿ ದೂರವಾಗಿದ್ದ ಶಿವಪಾಲ್, ಈ ಬಾರಿ ಮೈತ್ರಿಕೂಟದ ಅಡಿಯಲ್ಲಿ ಎಸ್ಪಿ ಚಿಹ್ನೆಯ ಮೇಲೆ ಚುನಾವಣೆಗೆ ಸ್ಪರ್ಧಿಸಿದ್ದರು.

ಅನೇಕ ಕಾರಣಗಳಿಂದಾಗಿ ಎಸ್ಪಿ ಸದಸ್ಯರು ತಮ್ಮ ಸ್ಥಾನವನ್ನ ಬದಲಾಯಿಸಿಕೊಂಡಿದ್ದಾರೆ. ಕೆಲ ಹಿರಿಯ ರಾಜಕಾರಣಿಗಳಿಗೆ ಮುಂದಿನ ಸಾಲಿನಲ್ಲಿ ಸ್ಥಾನವನ್ನ ಕೊಡಲಾಗಿದೆ. ಇದೇ ಸಂದರ್ಭದಲ್ಲಿ ಶಿವಪಾಲ್ ಯಾದವ್ ಅವರು ಕೂಡಾ ತಮ್ಮ ಸ್ಥಾನವನ್ನ ಬದಲಾಯಿಸುವಂತೆ ಕೋರಿಕೊಂಡಿದ್ದಾರೆ.

ಆಸನ ವ್ಯವಸ್ಥೆಯ ಕುರಿತಾಗಿ ಎಸ್ಪಿ ಪಕ್ಷದ ಅನೇಕ ಸದಸ್ಯರಿಗೆ ಅಸಮಾಧಾನವಿದೆ. ಸದನದ ಮುಂದಿನ ಸಾಲಿನ ಆಸನದ ಮೇಲೆಯೇ ತುಂಬಾ ಜನರಿಗೆ ಕಣ್ಣಿದೆ. ಪಕ್ಷದ ಓರ್ವ ಹಿರಿಯ ನಾಯಕ ಹೇಳೋ ಪ್ರಕಾರ, ಕಾರ್ಯಕ್ಷಮತೆ ಆಧಾರದ ಮೇಲೆ ಸದನದಲ್ಲಿ ಯಾರು ಎಲ್ಲಿ ಕುಳಿತುಕೊಳ್ಳಬೇಕು ಅನ್ನೋದು ಪಕ್ಷದ ನಾಯಕರು ನಿರ್ಧರಿಸಬೇಕು. ಅದರ ಹೊರತಾಗಿ ಯಾರ್ಯಾರೋ ನಿರ್ಧರಿಸುವಂತಿಲ್ಲ ಅಂತ ಸೂಕ್ಷ್ಮವಾಗಿ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...