ಮಹಿಳೆಯೊಬ್ಬರು ಮ್ಯಾನ್ಹೋಲ್ ಒಳಗೆ ಬಿದ್ದ ತನ್ನ 18 ತಿಂಗಳ ಮಗನನ್ನು ರಕ್ಷಿಸಲು ಚರಂಡಿಗೆ ಹಾರಿರುವ ಘಟನೆ ಯುಕೆನಲ್ಲಿ ನಡೆದಿದೆ. ಆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ವೈರಲ್ ಆಗಿದೆ.
23 ವರ್ಷದ ಆಮಿ ಬ್ಲೈತ್ ಅವರು ಕೆಂಟ್ನ ಆಶ್ಫೋರ್ಡ್ನಲ್ಲಿ ತನ್ನ ಮಗ ಥಿಯೋ ಜೊತೆ ನಡೆದುಕೊಂಡು ಹೋಗುತ್ತಿದ್ದಾಗ ಈ ಭಯಾನಕ ಘಟನೆ ನಡೆದಿದೆ. ಮಗು ಡ್ರೈನೇಜ್ ಬಳಿ ಅದೇನೆಂದು ಕುತೂಹಲದಿಂದ ನೋಡಲು ಹೋಗಿದೆ. ಈ ವೇಳೆ ಡ್ರೈನೇಜ್ ಮುಚ್ಚಳ ಒಮ್ಮೆಲೇ ಕುಸಿದ ಪರಿಣಾಮ ಬಾಲಕ ಚರಂಡಿಗೆ ಬಿದ್ದಿದ್ದಾನೆ.
ಮಗು ಚರಂಡಿಗೆ ಬೀಳುತ್ತಿದ್ದಂತೆ ಆತನನ್ನು ಹಿಡಿಯಲು ಪ್ರಯತ್ನಿಸಿದ್ರೂ ತಾಯಿಗೆ ಸಾಧ್ಯವಾಗಲಿಲ್ಲ. ಕೂಡಲೇ ಚರಂಡಿಗೆ ಜಿಗಿದ ಬ್ಲೈತ್ ತನ್ನ ಮಗ ಥಿಯೋನನ್ನು ರಕ್ಷಿಸಿದ್ದಾರೆ. ಈ ಭಯಾನಕ ಅನುಭವವನ್ನು ಅವರು ತಮ್ಮ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ.