ಬೆಂಗಳೂರಿನ ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ವಾರ್ಷಿಕ ಹಣ್ಣಿನ ಮೇಳ ಮತ್ತೆ ಆರಂಭವಾಗಿದೆ. ಕೋವಿಡ್ ಕಾರಣ ವಾರ್ಷಿಕ ಹಣ್ಣಿನ ಮೇಳ ಮಿಸ್ ಮಾಡಿಕೊಂಡ ಮಾವು ಮತ್ತು ಹಲಸು ಪ್ರಿಯರಿಗೆ ಇದು ನಿಜವಾಗಿಯೂ ಸಿಹಿ ಸುದ್ದಿ. ಎರಡು ವರ್ಷಗಳ ವಿರಾಮದ ನಂತರ ಮತ್ತೆ ಆಯೋಜನೆಯಾಗಿರುವ ಹಣ್ಣಿನ ಜಾತ್ರೆ ಸೋಮವಾರ ಚಾಲನೆ ಸಿಕ್ಕಿದೆ.
ಮಾವಿನ ಸೀಸನ್‌ನ ಅಂತ್ಯದ ಜುಲೈವರೆಗೆ ಈ ಮೇಳ ನಡೆಯಲಿದೆ. ಮಾವು ಮತ್ತು ಹಲಸು ಎರಡೂ ಹಣ್ಣುಗಳ ವೈರೆಟಿ 230ಕ್ಕೂಹೆಚ್ಚು ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿರುತ್ತದೆ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
”ಕನಿಷ್ಠ ಶೇ.30ರಷ್ಟು ಇಳುವರಿ ಕಡಿಮೆಯಾಗಿದ್ದು, ಹಣ್ಣುಗಳ ಆಗಮನವೂ ವಿಳಂಬವಾಗಿದೆ. ಆದರೆ, ರಾಮನಗರದಿಂದ ಮಾವು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಕೋಲಾರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಂದಲೂ ಶೀಘ್ರದಲ್ಲೇ ಹಣ್ಣುಗಳು ಬರುವ ನಿರೀಕ್ಷೆ ಇದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು.
Shocking: ನವಜಾತ ಶಿಶುವಿನ ಶವ ಕಚ್ಚಿ ತಿನ್ನಲು ಯತ್ನಿಸಿದ ನಾಯಿಗಳು..!
ಬಾದಾಮಿ, ರಸಪುರಿ ಮತ್ತು ಮಾಲ್ಗೋವಾ ಹಣ್ಣುಗಳಿಗೆ ಬೇಡಿಕೆಯಿದೆ. ಇಮಾಮ್ ಪಸಂದ್ ಎಂಬ ಹೊಸ ಹಣ್ಣಿಗೂ ಬೇಡಿಕೆ ಹೆಚ್ಚಾಗಿದೆ. ಸದ್ಯ 13 ಬಗೆಯ ಮಾವಿನ ಹಣ್ಣುಗಳು ಮಾರಾಟಕ್ಕಿವೆ. ಬಾದಾಮಿ ಮತ್ತು ಮಲ್ಲಿಕಾ ತಳಿಯ ಮಾವು ಕೆಜಿಗೆ 110 ರೂ., ಮಾಲ್ಗೋವಾ ಕೆಜಿಗೆ 175 ರೂ. ಮತ್ತು ಅಲ್ಫೋನ್ಸೋ ಕೆಜಿಗೆ 126 ರೂ. ಹೊಸ ತಳಿಯ ಹಣ್ಣು ಇಮಾಮ್ ಪಸಂದ್ ಕಿಲೋಗೆ 215 ರೂಪಾಯಿ ಇದ್ದು, ಲಾಟ್‌ಗಳಲ್ಲಿ ಅತ್ಯಂತ ದುಬಾರಿಯಾಗಿದೆ ಎಂದು ಅಧಿಕಾರಿ ತಿಳಿಸಿದರು.