ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ವರುಣನ ಆರ್ಭಟಕ್ಕೆ ತತ್ತರಿಸಿದ್ದು, ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಮೂರನೇ ದಿನವೂ ಭೇಟಿ ನೀಡಿದ್ದು, ಸ್ಥಳೀಯರಿಂದ ಮಾಹಿತಿ ಪಡೆದಿದ್ದಾರೆ.
ಸಾಯಿ ಬಡಾವಣೆ, ನಾಗಪ್ಪ ರೆಡ್ಡಿ ಬಡಾವಣೆ, ಪೈ ಬಡಾವಣೆ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ಮಳೆ ಹಾನಿ ಪ್ರದೇಶಗಳ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಇಂದು ವಲಯವಾರು ಸಚಿವರನ್ನು ನೇಮಕ ಮಾಡಲಾಗುವುದು ಎಂದರು.
ಪ್ಲೇಆಫ್ ಗೆ RCB: ಯಾರು ಸೋತು, ಯಾರು ಗೆಲ್ಲಬೇಕು…? ಹೀಗಿದೆ ಲೆಕ್ಕಾಚಾರ
ಒಂದೊಂದು ಜೋನ್ ಟಾಸ್ಕ್ ಫೋರ್ಸ್ ಮಾಡಲಾಗುವುದು. 8 ಜೋನ್ ಗಳಲ್ಲಿ 8 ಸಚಿವರ ನೇಮಕ ಮಾಡುತ್ತೇವೆ. ಸಚಿವರು, ಶಾಸಕರು, ಸಂಸದರು, ಇಂಜಿನಿಯರ್ ಗಳು ಟಾಸ್ಕ್ ಫೋರ್ಸ್ ನಲ್ಲಿರಲಿದ್ದಾರೆ. ಕೆಲವೆಡೆ ರಾಜಕಾಲುವೆಗಳ ಮೇಲೆ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಅಂತಹ ಮನೆ ತೆರವುಗೊಳಿಸಿ ಹಂತ ಹಂತವಾಗಿ ಪರಿಹಾರ ವಿತರಣೆ ಮಾಡಲಾಗುವುದು. 900 ಮೀಟರ್ ಅಡಿಷನಲ್ ಡ್ರೈನೇಜ್ ಕೂಡ ಮಾಡುತ್ತಿದ್ದೇವೆ ಎಂದು ಹೇಳಿದರು.