ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು ಅನ್ನೋದು ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾ ಡೈಲಾಗ್. ಆದರೆ ಈ ಮಾತು ಪ್ರೇಮಿಗಳಿಗಂತಾನೇ ಹೇಳಿ ಮಾಡಿಸಿರೋದು. ಈಗ ಇದೇ ಮಾತಿನಂತೆ ನಡೆದುಕೊಂಡಿದ್ದಾನೆ ಬಿಹಾರ್ನ ನಾವದಾ ಜಿಲ್ಲೆಯ ಯುವಕ.
ಅಸಲಿಗೆ ಈ ಜಿಲ್ಲೆಯ ಹಿಸುವಾ ಪೊಲೀಸ್ ಠಾಣಾ ವ್ಯಾಪ್ತಿಯ ಖಾನಖನಾಪುರದಲ್ಲಿ ಯುವಕ ತನ್ನ ಗೆಳತಿಯನ್ನ ಭೇಟಿಯಾಗಲು ಕದ್ದು ಮುಚ್ಚಿ ಬಂದಿದ್ದ. ಇನ್ನೇನು ಗೆಳತಿಯ ಮುಖ ನೋಡಬೇಕು ಅನ್ನೊ ಅಷ್ಟರಲ್ಲೇ ಗ್ರಾಮಸ್ಥರ ಕೈಗೆ ಸಿಕ್ಕಾಕಿಕೊಂಡು ಬಿಟ್ಟ ಪುಣ್ಯಾತ್ಮ.
ಕೋವಿಡ್ ಸೋಂಕಿತರನ್ನು ಪತ್ತೆ ಮಾಡುವ ಸಾಮರ್ಥ್ಯ ಹೊಂದಿವೆ ಶ್ವಾನ
ಮೊದಲಿಗೆ ಆ ಪ್ರಿಯಕರನಿಗೆ ಗ್ರಾಮಸ್ಥರು ಸೇರಿ ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕೊನೆಗೆ ಗ್ರಾಮಸ್ಥರು ಹಾಗೂ ಹುಡುಗಿಯ ಮನೆಯವರು ಸೇರಿ ಇಬ್ಬರಿಗೂ ಸ್ಥಳದಲ್ಲೇ ಮದುವೆ ಮಾಡಿಸಿದ್ದಾರೆ. ಹಠಾತ್ ಮದುವೆಯಿಂದಾಗಿ ಮದುಮಗ ಗಲಿಬಿಲಿಗೊಂಡಿದ್ದಾನೆ. ಸೊಶಿಯಲ್ ಮಿಡಿಯಾದಲ್ಲಿ ಈಗ ಈ ಮದುವೆ ವಿಡಿಯೋ ಸಖತ್ ವೈರಲ್ ಆಗ್ತಿದೆ.
ಪ್ರೇಮಿಯ ಹೆಸರು ರಾಜುಖಾನ್ ಅಂತ ಹೇಳಲಾಗುತ್ತಿದೆ. ಈತ ಪಕ್ಕದ ಮುಂಗೇರ್ ಜಿಲ್ಲೆಯ ನಯಾ ಗ್ರಾಮದ ನಿವಾಸಿಯಾಗಿದ್ದಾನೆ. ಇನ್ನು ಹುಡುಗಿ ಖಾನಖನಾಪುರದ ಬುಲಂದ್ ಅಖ್ತರ್ ಅವರ ಪುತ್ರಿ ಶಬಾನಾ ಪರ್ವೀನ್ ಆಗಿದ್ದಾರೆ.
ಪ್ರೇಯಸಿಯನ್ನ ನೋಡಲು ಬಂದವ ಈಗ ಹೆಂಡತಿಯನ್ನು ಮನೆಗೆ ಕರೆದುಕೊಂಡು ಹೋಗಿದ್ಧಾನೆ. ಈ ವಿಡಿಯೋ ನೋಡಿ ನೆಟ್ಟಿಗರು ಎಂಜಾಯ್ ಮಾಡ್ತಿದ್ದಾರೆ.