ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಟಿಸಿರೋ ವರದಿಯ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಶೇಕಡಾ 78.9ರಷ್ಟು ಕುಟುಂಬ ಸೈಕಲ್ ಹೊಂದಿದೆ. ಇದು ದೇಶದಲ್ಲೇ ಅತಿ ಹೆಚ್ಚು ಸೈಕಲ್ ಹೊಂದಿದ ರಾಜ್ಯವಾಗಿದೆ. ಇನ್ನು ಉತ್ತರ ಪ್ರದೇಶ ಶೇಕಡಾ 75. 6 ಹೊಂದಿದ್ದು ಇದು ಎರಡನೇ ಸ್ಥಾನದಲ್ಲಿದೆ. ಇದೇ ಸಮೀಕ್ಷೆ ವರದಿ ಪ್ರಕಾರ ದೇಶದಲ್ಲಿ ಸರಾಸರಿ 50.4 ಪ್ರತಿಶತ ಕುಟುಂಬಗಳು ಸೈಕಲ್ಗಳನ್ನ ಹೊಂದಿದೆ ಎಂದು ತಿಳಿಸಿದೆ.
NFHS ನ 2019-22ರ ವರದಿ ಪ್ರಕಾರ ಒಡಿಶಾದಲ್ಲಿ ಶೇಕಡಾ 72.5, ಛತ್ತಿಸ್ಗಢ್ನಲ್ಲಿ ಶೇಕಡಾ 70.8 ಅಸ್ಸಾಂನಲ್ಲಿ ಶೇಕಡಾ 70.3, ಪಂಜಾಬ್ನಲ್ಲಿ ಶೇಕಡಾ 67.8, ಜಾರ್ಖಂಡ್ನಲ್ಲಿ ಶೇಕಡಾ 66.3 ಮತ್ತು ಬಿಹಾರ್ನಲ್ಲಿ ಶೇಕಡಾ 64.8ರಷ್ಟು ಕುಟುಂಬಗಳು ಸೈಕಲ್ಗಳನ್ನ ಹೊಂದಿವೆ.
ಮೊಬೈಲ್ ಬಳಕೆದಾರರೇ ಎಚ್ಚರ: ಮತ್ತೆ ವಕ್ಕರಿಸಿದೆ ʼಜೋಕರ್ʼ ಮಾಲ್ವೇರ್
ನಾಗಾಲ್ಯಾಂಡ್ನಲ್ಲಿ ಶೇಕಡಾ 5.5ರಷ್ಟು ಮಾತ್ರ ಕುಟುಂಬಗಳು ಸೈಕಲ್ಗಳನ್ನ ಹೊಂದಿವೆ. ಸಿಕ್ಕಿಂನಲ್ಲೂ ಕೂಡಾ ಶೇಕಡಾ 5.9ರಷ್ಟು ಸೈಕಲ್ಗಳಿವೆ ಅಂತ ಈ ವರದಿ ಹೇಳಿದೆ. ಅದೇ ರೀತಿ ಗುಜರಾತ್ನಲ್ಲಿ ಶೇಕಡಾ 29.9 ಮತ್ತು ದೆಹಲಿಯಲ್ಲಿ ಶೇಕಡಾ 27.2 ಪ್ರತಿಶತ ಕುಟುಂಬಗಳು ಸೈಕಲ್ನ್ನ ಹೊಂದಿವೆ.
ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಮಾಡಿರೋ ‘ಸಬೂಜ್ ಸಾಥಿ‘ ಅನ್ನೊ ಯೋಜನೆಯಿಂದಾಗಿ ಈ ರಾಜ್ಯ ಮೊದಲನೇ ಸ್ಥಾನದಲ್ಲಿದೆ. ಜೊತೆಗೆ ಈ ಯೋಜನೆಯಡಿಯಲ್ಲಿ 9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಸೈಕಲ್ ನೀಡಲಾಗುತ್ತದೆ. ಈ ಸೈಕಲ್ಗಳಿಂದ ವಿದ್ಯಾರ್ಥಿಗಳಿಗೆ ಮಾತ್ರ ಅಲ್ಲ ಕುಟುಂಬದವರಿಗೂ ಉಪಯುಕ್ತವಾಗಿವೆ.