2021 ರಲ್ಲಿ ಯುಎಸ್ ಗೆ ಪ್ರಯಾಣ ಬೆಳೆಸಿದ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ಕಳೆದ ವರ್ಷ ಯುಎಸ್ ಗೆ 2.2 ಕೋಟಿ ಅಂತಾರಾಷ್ಟ್ರೀಯ ಪ್ರಯಾಣಿಕರು ಭೇಟಿ ನೀಡಿದ್ದಾರೆ.
ಇದು ಸಾಂಕ್ರಾಮಿಕ ಬರುವುದಕ್ಕಿಂತ ಮುನ್ನ ಅಂದರೆ, 2019 ಕ್ಕಿಂತ ಶೇ.72 ರಷ್ಟು ಕಡಿಮೆಯಾಗಿದೆ. ಮೆಕ್ಸಿಕೋ 1 ಕೋಟಿ ಮತ್ತು ಕೆನಡಾದ 25.3 ಲಕ್ಷ ಜನರು ಭೇಟಿ ನೀಡಿದ್ದರೆ ಭಾರತವು ಮೂರನೇ ಅತಿದೊಡ್ಡ ಸಾಗರೋತ್ತರ ಮೂಲ ದೇಶವಾಗಿದ್ದು, ಇಲ್ಲಿಂದ 4.3 ಲಕ್ಷ ಜನರು ಭೇಟಿ ನೀಡಿದ್ದರೆ,
ತೂಕ ಇಳಿಸಿಕೊಳ್ಳುವ ವೇಳೆ ಅಪ್ಪಿತಪ್ಪಿಯೂ ಮಾಡೀರಿ ಈ ತಪ್ಪು…….!
ಕೊಲಂಬಿಯಾದಿಂದ 10.6 ಲಕ್ಷ ಮತ್ತು ಯುನೈಟೆಡ್ ಕಿಂಗ್ಡಂನಿಂದ 4.6 ಲಕ್ಷ ಜನರು ಭೇಟಿ ನೀಡಿದ್ದಾರೆ ಎಂದು ಯುಎಸ್ ನ ವಾಣಿಜ್ಯ ಇಲಾಖೆ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ.
ಅಮೇರಿಕಾದಲ್ಲಿ ಹೆಚ್ಚು ಹಣ ಖರ್ಚು ಮಾಡಿದ ಸಾಗರೋತ್ತರ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. 2021 ರಲ್ಲಿ ಪ್ರವಾಸೋದ್ಯಮ ಸಂಬಂಧಿತ ರಫ್ತು 81 ಬಿಲಿಯನ್ ಡಾಲರ್ ಆಗಿದೆ. ಈ ಪೈಕಿ ಮೆಕ್ಸಿಕೋ 11.7 ಬಿಲಿಯನ್, ಚೀನಾ 9 ಬಿಲಿಯನ್ ಮತ್ತು ಭಾರತದಿಂದ 5.8 ಬಿಲಿಯನ್ ಡಾಲರ್ ನಷ್ಟು ವಹಿವಾಟು ನಡೆದಿದೆ.
ಭಾರತದಿಂದ 4.3 ಲಕ್ಷ ಪ್ರವಾಸಿಗರು ಯುಎಸ್ ಗೆ ಭೇಟಿ ನೀಡಿದ್ದಾರೆ. ಇದು 2019 ರ ಸಾಂಕ್ರಾಮಿಕಕ್ಕಿಂತ ಮುನ್ನ ಇದ್ದ ಪ್ರಮಾಣಕ್ಕಿಂತ ಶೇ.71 ರಷ್ಟು ಕಡಿಮೆ ಇದೆ ಎಂದು ಅಂಕಿಅಂಶಗಳು ತಿಳಿಸಿವೆ.