ಬೆಂಗಳೂರು: ಆರೋಗ್ಯವಾಗಿರಲು ನಾವು ಪ್ರತಿದಿನ ಎಷ್ಟು ನೀರು ಕುಡಿಯಬೇಕು? ಕೆಲವರು ದಿನಕ್ಕೆ 2 ಲೀಟರ್, 3 ಲೀಟರ್ ನೀರು ಕುಡಿಯಬೇಕು ಎಂದು ಹೇಳುತ್ತಾರೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತೆ, ಇನ್ನು ಕೆಲವರು ನಾವು ನೀರೇ ಕುಡಿಯಲ್ಲ, ಬಾಯಾರಿಕೆಯೇ ಆಗಲ್ಲ ಎನ್ನುವವರೂ ಇದ್ದಾರೆ. ಹಾಗದರೆ ನಿಜಕ್ಕೂ ನಮ್ಮ ದೇಹಕ್ಕೆ ಪ್ರತಿದಿನ ನೀರಿನ ಅಗತ್ಯ ಎಷ್ಟು? ಎಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು? ಈ ಬಗ್ಗೆ ಡಾ. ರಾಜು ಮಹತ್ವದ ಮಾಹಿತಿ ನೀಡಿದ್ದಾರೆ.
ನಮ್ಮ ದೇಹದ ಪ್ರತಿಯೊಂದು ಸೆಲ್ ಗೂ ನೀರಿನ ಅಗತ್ಯವಿದೆ. ದೇಹದ ಯಾವುದೇ ಭಾಗಕ್ಕೆ ನೀರು ಬೇಕು ಎಂದಾದಾಗ ನರಗಳ ಮೂಲಕ ನಮ್ಮ ಮೆದುಳಿಗೆ ಸಂದೇಶ ರವಾನೆಯಾಗುತ್ತೆ. ಆಗ ಮೆದುಳಿನಲ್ಲಿರುವ ಹೈಪೋತಲಾಮಸ್ ನಮ್ಮ ದೇಹಕ್ಕೆ ನೀರು ಬೇಕು, ಎಷ್ಟು ಪ್ರಮಾಣದಲ್ಲಿ ಬೇಕು ಎಂಬುದನ್ನು ನಿರ್ಧರಿಸುತ್ತದೆ. ಆಗ ನಮಗೆ ಬಾಯಾರಿಕೆಯಾಗುತ್ತದೆ. ನೀರು ಕುಡಿಯಬೇಕು ಎನಿಸುತ್ತದೆ. ಒಂದು ವೇಳೆ ನಮಗೆ ಬಾಯಾರಿಕೆಯಾಗಿಲ್ಲ ಎಂದರೆ ನಮ್ಮ ದೇಹಕ್ಕೆ ನೀರಿನ ಅವಶ್ಯಕತೆ ಇಲ್ಲ ಎಂದರ್ಥ.
ಲಾಡ್ಜ್ ನಲ್ಲಿ ಹಲ್ಲೆಗೊಳಗಾಗಿದ್ದ ಮಂಗಳಮುಖಿ ಸಾವು
ಬೇಸಿಗೆಯಲ್ಲಿ ನಮ್ಮ ದೇಹಕ್ಕೆ ಹೆಚ್ಚು ಆಯಾಸವಾಗುತ್ತೆ, ಬೆವರು ಹೆಚ್ಚಾಗುತ್ತೆ ಅಂತಹ ಸಂದರ್ಭದಲ್ಲಿ ಬಾಯಾರಿಕೆ ಹೆಚ್ಚುತ್ತೆ ನೀರಿನ ಅಗತ್ಯವಿರುತ್ತದೆ. ಅದೇ ಚಳಿಗಾಲ ಹಾಗೂ ಮಳೆಗಾಲಗಳಲ್ಲಿ ಬಾಯಾರಿಕೆ ಕಡಿಮೆಯಿರುತ್ತದೆ. ಇನ್ನು ಅವಶ್ಯಕತೆಗಿಂತ ಹೆಚ್ಚಿಗೆ ನೀರು ಕುಡಿದರೆ ಮೂತ್ರದ ಮೂಲಕ ಹೊರಗೆ ಹೋಗುತ್ತದೆ ಹೊರತು ಆರೋಗ್ಯಕ್ಕೆ ಅನುಕೂಲವಾಗುವುದಿಲ್ಲ. ನೀರನ್ನು ಎಷ್ಟು ಪ್ರಮಾಣದಲ್ಲಿ ಯಾವಾಗ ಕುಡಿಯಬೇಕು ಎಂಬುದನ್ನು ನಿರ್ಧರಿಸುವುದು ನಿಮ್ಮ ದೇಹವೇ ಹೊರತು ವೈದ್ಯರೋ ಅಥವಾ ಇನ್ನಾರೋ ಎಕ್ಸ್ ಪರ್ಟ್ ಗಳಲ್ಲ ಎಂದು ಹೇಳಿರುವ ದಾ.ರಾಜು ಯಾವ ಯಾವ ಸಂದರ್ಭಗಳಲ್ಲಿ ನಾವು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು ಎಂಬುದನ್ನೂ ತಿಳಿಸಿದ್ದಾರೆ.
* ಉರಿಮೂತ್ರದಂತಹ ಸಮಸ್ಯೆಯಾದಾಗ ಪ್ರತಿನಿತ್ಯ ನಾವು ಕುಡಿಯುವ ನೀರಿನ ಪ್ರಮಾಣಕ್ಕಿಂತ ಹೆಚ್ಚು ನೀರು ಕುಡಿಯುವುದು ಉತ್ತಮ.
* ದೇಹದಲ್ಲಿ ಡಿಹೈಡ್ರೇಷನ್, ಬೇದಿಯಾದಾಗ ನೀರನ್ನು ಹೆಚ್ಚು ಕುಡಿಯಬೇಕು
* ಗ್ಯಾಸ್ಟ್ರಿಕ್ ಅಥವಾ ಎಸಿಡಿಟಿ, ಹೊಟ್ಟೆಯುರಿಯಂತಹ ಸಮಸ್ಯೆಯಾದಾಗ ಇತರ ಆಹಾರ ಕಡಿಮೆ ಮಾಡಿ ನೀರನ್ನು ಹೆಚ್ಚು ಕುಡಿಯಬೇಕು ಎಂದು ಸಲಹೆ ನೀಡಿದ್ದಾರೆ.