‘ಪುಷ್ಪಾ‘ ಅಲ್ಲು ಅರ್ಜುನ್ ನಟನೆಯ ಸೂಪರ್ ಡೂಪರ್ ಹಿಟ್ ಸಿನೆಮಾ. ಈ ಸಿನೆಮಾ ಹೆಚ್ಚು ಸದ್ದು ಮಾಡಿದ್ದು ಎರಡು ಕಾರಣಕ್ಕೆ. ಒಂದು ಅಲ್ಲು ಅರ್ಜುನ್ ಡ್ಯಾಶಿಂಗ್ ನಟನೆಗೆ ಇನ್ನೊಂದು ಈ ಸಿನೆಮಾದ ಕಥಾ ವಸ್ತು. ರಕ್ತ ಚಂದನ ಕಳ್ಳ ಸಾಗಣೆ ಯಾವೆಲ್ಲ ರೀತಿಯಲ್ಲಿ ಆಗುತ್ತೆ ಅನ್ನೋದು ಈ ಸಿನೆಮಾದ ಕಥಾವಸ್ತು ಆಗಿತ್ತು.
ಅಸಲಿಗೆ ಇದು ಕಲ್ಪಿಸಿಕೊಂಡು ಸೃಷ್ಟಿಸಿರೋ ಕಥೆ ಅಲ್ಲ. ವಾಸ್ತವದಲ್ಲಿಯೂ ರಕ್ತ ಚಂದನದ ಕಳ್ಳ ಸಾಗಣೆ ನಡೆಯುತ್ತೆ. ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ಇಂಥಹದ್ದೊಂದು ಪ್ರಕರಣ ಬೆಳಕಿಗೆ ಬಂದಿದೆ. ಅದು ಎರಡು ಪ್ರತ್ಯೇಕ ಘಟನೆ, ಅದರಲ್ಲಿ 11ಕೋಟಿ ರೂ. ಮೌಲ್ಯದ ರಕ್ತ ಚಂದನವನ್ನ ಪೊಲೀಸರು ವಶಪಡಿಸಿಕೊಂಡು, 12 ಜನರನ್ನ ಬಂಧಿಸಿದ್ದಾರೆ.
SHOCKING NEWS: ಆಸಿಡ್ ದಾಳಿಗೆ ಯುವತಿಯೇ ಕಾರಣ, ತಂದೆಗೆ ಹೇಳಿದ್ದಕ್ಕೆ ಆಸಿಡ್ ಹಾಕಿದ್ದೇನೆ ಎಂದ ಆರೋಪಿ
ಆಂಧ್ರಪ್ರದೇಶದಿಂದ ಚೆನ್ನೈಗೆ ರಕ್ತ ಚಂದನವನ್ನ ಕಾರು ಮತ್ತು ಮಿನಿ ವಾಹನದಲ್ಲಿ ಕಳ್ಳಸಾಗಾಣೆ ನಡೆಸುತ್ತಿದ್ದಾಗ ಎಸ್‌ವಿ ಪುರಂ ಟೋಲ್ ಪ್ಲಾಜಾದಲ್ಲಿ ಕಳ್ಳಸಾಗಾಣೆದಾರರನ್ನ ಪೊಲೀಸರು ಹಿಡಿದಿದ್ದಾರೆ.
ಸುಮಾರು 8 ಗೋಣಿಚೀಲಗಳಲ್ಲಿ 191 ರಕ್ತ ಚಂದನದ ಮರದ ದಿಮ್ಮಿಗಳು ಹಾಗೂ ಸಣ್ಣ ತುಂಡುಗಳು ಪತ್ತೆಯಾಗಿವೆ. ಸ್ಥಳೀಯ ಪೊಲೀಸರು ಕಳ್ಳಸಾಗಾಣೆದಾರರನ್ನ ಬಂಧಿಸಿ ಈಗ ಪ್ರಕರಣ ಕುರಿತು ತನಿಖೆ ನಡೆಸುತ್ತಿದ್ದಾರೆ.