ಅಮೆಜಾನ್ ಬಾಲಕಿ ಆಬ್ರೆಗಾಗಿ ಪ್ರಾರ್ಥಿಸುತ್ತಿದೆ. ಲವ್ ಯು ಎಂಬ ಸಂದೇಶವನ್ನು ಬರೆಯಲಾಗಿದೆ. ಆಬ್ರೆಯ ತಾಯಿ ಲಿಂಡ್ಸಿ ಹಟ್ಸನ್, ಆಂಡರ್ಸನ್ ಬರೆದ ಹೃದಯಸ್ಪರ್ಶಿ ಸಂದೇಶವನ್ನು ನೋಡಿ ಭಾವುಕಳಾಗಿದ್ದಾಳೆ. ಕೂಡಲೇ ಅಮೆಜಾನ್ ಚಾಲಕನ ಹಿಂದೆ ಓಡಿದ ಆಕೆ, ಸಂದೇಶ ಒಳ್ಳೆಯತನದಿಂದ ಕೂಡಿದ್ದು ಅದ್ಭುತವಾಗಿದೆ ಎಂದು ತಿಳಿಸಿದ್ದಾಳೆ. ಇದಕ್ಕೆ ಆತ, ತಾನು ಅದ್ಭುತವಲ್ಲ.. ಬಾಲಕಿ ಆಬ್ರೆ ಬಹಳ ಅದ್ಭುತ ಎಂದು ಉತ್ತರಿಸಿದ್ದಾನೆ.
ಆಬ್ರೆ ಹಟ್ಸನ್ ಳ ತಲೆ ಬೋಳಿಸಿದ ಕಾರಣ ಮತ್ತು ಹೋಪ್ ಫಾರ್ ಆಬ್ರೆ ಎಂಬ ಬರಹವು ಆಕೆಯ ಮನೆಯ ಹೊರಗೆ ಇರುವ ಚಿಹ್ನೆಗಳಿಂದಾಗಿ, ಆಬ್ರೆ ಹಟ್ಸನ್ ಗೆ ಕ್ಯಾನ್ಸರ್ ಇರುವುದು ಆಂಡರ್ಸನ್ ಅವರಿಗೆ ಗೊತ್ತಾಗಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, ಇದೊಂದು ಭಾವುಕ ಕ್ಷಣ ಅಂತೆಲ್ಲಾ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಬಾಲಕಿಯ ಶೀಘ್ರ ಚೇತರಿಕೆಗೆ ನೆಟ್ಟಿಗರು ಹಾರೈಸಿದ್ದಾರೆ.