alex Certify BIG NEWS: ಭಾರಿ ಮಳೆಗೆ ಕೇತೋಹಳ್ಳಿಯ ದೊಡ್ಡ ಆಲದ ಮರಕ್ಕೆ ಹಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರಿ ಮಳೆಗೆ ಕೇತೋಹಳ್ಳಿಯ ದೊಡ್ಡ ಆಲದ ಮರಕ್ಕೆ ಹಾನಿ

ಬೆಂಗಳೂರು: 400 ವರ್ಷಗಳ ಇತಿಹಾಸ ಹೊಂದಿರುವ ಬೆಂಗಳೂರಿನ ದಕ್ಷಿಣದ ಕೇತೋಹಳ್ಳಿಯಲ್ಲಿರುವ ದೊಡ್ಡ ಆಲದ ಮರದ ಒಂದು ಭಾಗವು ಸುರಿದ ಭಾರೀ ಮಳೆಗೆ ಹಾನಿಗೊಳಗಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮರಗಳ ರಕ್ಷಣೆಗೆಂದೇ ರಚನೆಯಾಗಿರುವ ಸಲಹಾ ಸಮಿತಿಯು ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಬಗ್ಗೆ ಪರಶೀಲನೆ ನಡೆಸಲಿದೆ ಎಂದು ಅಧಿಕಾರಿಗಳು ಹೇಳಿದರು.

ವರನ ಶೂ ವಾಪಸ್ ನೀಡಲು ಚಕ್ರವಾಟವಾಡಿದ ನಾದಿನಿಯರು…..!

ಸುರಿದ ರಭಸ ಮಳೆ ಮತ್ತು ಜೋರಾದ ಗಾಳಿಯಿಂದಾಗಿ ಆಲದ ಮರದ ಸ್ವಲ್ಪ ಭಾಗ ಮುರಿದು ಬಿದ್ದಿದೆ. ದೊಡ್ಡ ಆಲದ ಸಲಹಾ ಸಮಿತಿಯು ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಬಗ್ಗೆ ಅಂದಾಜಿಸಿ, ಪರಿಹಾರ ಕ್ರಮಗಳನ್ನು ಕೈಗೊಳ್ಳಲಿದೆ. ಸಮಿತಿಯು ಮೌಲ್ಯಮಾಪನ ಕೈಗೊಂಡ ನಂತರವೇ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಸುಮಾರು 3 ಎಕರೆ ಜಾಗದಲ್ಲಿರುವ ಈ ದೊಡ್ಡ ಆಲದ ಮರವು 95 ಅಡಿ ಎತ್ತರವಿದೆ. ಬಹಳಷ್ಟು ವಿಶಾಲವಾಗಿರುವ ಈ ಆಲದ ಮರದ ವಿಶೇಷತೆ ಎಂದರೆ ನೇತಾಡುತ್ತಿರುವ ನೂರಾರು ಬೇರುಗಳ ಕೊಂಬೆಗಳು. ಇದು ಭಾರತದ ನಾಲ್ಕನೇ ಪುರಾತನ ಆಲದಮರವೂ ಹೌದು. ಇನ್ನು ಪ್ರವಾಸೋದ್ಯಮ ಇಲಾಖೆಯು ದೊಡ್ಡ ಆಲದ ಮರವನ್ನು ಪಾರಂಪರಿಕ ವೃಕ್ಷವೆಂದು ಗುರುತಿಸಿ ಈ ತಾಣವನ್ನು ಪ್ರವಾಸಿ ತಾಣವೆಂದು ಘೋಷಿಸಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...