ಬೆಂಗಳೂರು: ಕಳೆದ ಎರಡು ವಾರಗಳಿಂದ ರಾಜ್ಯದ ಕೆಲವೆಡೆ ಆಲಿಕಲ್ಲು ಮಳೆಯಾಗಿದೆ. ಸೈಕ್ಲೋನ್ ಪರಿಣಾಮ ಸತತ ಮಳೆಯಿಂದ ಟೊಮೆಟೊ ಬೆಳೆ ಹಾಳಾಗಿದ್ದು, ಇದರಿಂದಾಗಿ ಒಂದು ಕೆಜಿಗೆ 80 ರಿಂದ 95 ರೂಪಾಯಿಗೆ ಏರಿಕೆಯಾಗಿದೆ.
ಪ್ರತಿ ಕೆಜಿಗೆ 60 ರಿಂದ 70 ರೂ.ವರೆಗೂ ತಲುಪಿದ್ದ ಟೊಮೆಟೊ ದರ ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗುತ್ತಿದ್ದಂತೆ 100 ರೂ. ಸನಿಹಕ್ಕೆ ಬಂದಿದೆ. ಟೊಮೆಟೊ ಬೆಳೆಗೆ ಹಾನಿಯಾಗಿರುವುದರಿಂದ ಪೂರೈಕೆ ಪ್ರಮಾಣ ಕಡಿಮೆಯಾಗಿದೆ. ಊರ ಹಬ್ಬ, ಜಾತ್ರೆ, ಮದುವೆ, ಗೃಹಪ್ರವೇಶ, ಅನ್ನಸಂತರ್ಪಣೆ ನಡೆಯುತ್ತಿರುವುದರಿಂದ ಟೊಮೆಟೊಗೆ ಬೇಡಿಕೆ ಹೆಚ್ಚಾಗಿದೆ.
ಹಾಪ್ ಕಾಮ್ಸ್ ನಲ್ಲಿ ಟೊಮೆಟೊ ದರ ಕೆಜಿಗೆ 75 ರೂ. ಇದ್ದು, ಮಾರುಕಟ್ಟೆಯಲ್ಲಿ 70 ರಿಂದ 80 ರೂಪಾಯಿ ದರ ಇದೆ. ಕೆಲವಡೆ 95 ರೂ.ವರೆಗೂ ಮಾರಾಟವಾಗುತ್ತಿದೆ. ಇದರಿಂದಾಗಿ ಗ್ರಾಹಕರಿಗೆ ನುಂಗಲಾರದ ತುತ್ತಾಗಿದೆ.