ಮೂರು ದಶಕಗಳಷ್ಟು ಹಳೆಯದಾದ ಕೊಲೆ ಪ್ರಕರಣವದು. ಅಲಿಬಾಗ್‌ನ ವಿಚಾರಣಾ ನ್ಯಾಯಾಲಯವು 1998 ರಲ್ಲಿ ಆರೋಪಿ ಯುವಕ ಅಪರಾಧಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. 30 ವರ್ಷಗಳ ಬಳಿಕ ಬಾಂಬೆ ಹೈಕೋರ್ಟ್ ಈ ಯುವಕ ಅಪರಾಧಿ ಎಂದು ಹೇಳುವುದಕ್ಕೆ ಯಾವುದೇ ನಿಖರವಾದ ಸಾಕ್ಷ್ಯವಿಲ್ಲ ಎಂದು ತೀರ್ಪು ನೀಡಿ ಖುಲಾಸೆ ಮಾಡಿದೆ.
ನ್ಯಾಯಮೂರ್ತಿಗಳಾದ ಸಾಧನಾ ಜಾಧವ್ ಮತ್ತು ಮಿಲಿಂದ್ ಜಾಧವ್ ಅವರಿದ್ದ ನ್ಯಾಯಪೀಠ, ಈ ಪ್ರಕರಣದಲ್ಲಿ ಈಟಿಯಿಂದ ಚುಚ್ಚಲ್ಪಟ್ಟು ವ್ಯಕ್ತಿ ಸಾವಿಗೀಡಾಗಿದ್ದಾನೆ. ಆ ಈಟಿಯನ್ನು ತಂದೆ ಹಿಡಿದುಕೊಂಡಿದ್ದ ಎಂಬ ಅಂಶ ಸ್ಪಷ್ಟವಾಗಿ ತನಿಖಾ ವರದಿಯಲ್ಲಿ ಉಲ್ಲೇಖವಾಗಿದೆ. ಪುತ್ರನನ್ನು ಈ ಪ್ರಕರಣದಲ್ಲಿ ಸೇರಿಸುವುದಕ್ಕೆ ಸರಿಯಾದ ಸಾಕ್ಷ್ಯಗಳು ಇಲ್ಲ. ಪ್ರಾಸಿಕ್ಯೂಷನ್ ಸಲ್ಲಿಸಿದ ಪುರಾವೆಗಳು ಸ್ಥಿರವಾಗಿಲ್ಲ ಅಥವಾ ಸಾಂದ್ರವಾಗಿಲ್ಲ ಮತ್ತು ವಿಶ್ವಾಸಾರ್ಹವಲ್ಲ. ಆದ್ದರಿಂದ ಮೇಲ್ಮನವಿದಾರರು ಅನುಮಾನದ ಪ್ರಯೋಜನಕ್ಕೆ ಅರ್ಹರಾಗಿದ್ದಾರೆ ಎಂದು ಹೇಳಿ ಖುಲಾಸೆಗೊಳಿಸಿದೆ.
ನೆಟ್ಟಿಗರು ತಲೆಕೆರೆದುಕೊಳ್ಳುವಂತೆ ಮಾಡಿದೆ ಫುಟ್ಬಾಲ್ ಆಟಗಾರರ ಆಪ್ಟಿಕಲ್ ಇಲ್ಯೂಷನ್ ಫೋಟೋ..!
ಅಲಿಬಾಗ್ ವ್ಯಾಪ್ತಿಯಲ್ಲಿ 1990ರ ಮೇ ತಿಂಗಳಲ್ಲಿ ವ್ಯಕ್ತಿಯೊಬ್ಬ ತನ್ನ ಮದುವೆಯ ಸಂಭ್ರಮದಲ್ಲಿದ್ದಾಗ ಆತನನ್ನು ಈಟಿಯಿಂದ ಚುಚ್ಚಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿ ವ್ಯಕ್ತಿ ಮತ್ತು ಆತನ ಪುತ್ರ ಅಪರಾಧಿ ಎಂದು ಸ್ಥಳೀಯ ಸೆಷನ್ಸ್ ನ್ಯಾಯಾಲಯ ಘೋಷಿಸಿತ್ತು. ಇವರ ಜತೆಗೆ ಗುಂಪಿನಲ್ಲಿದ್ದ ಇತರೆ ಒಂಭತ್ತು ಜನರನ್ನು ಖುಲಾಸೆಗೊಳಿಸಲಾಗಿತ್ತು. ಸೆಷನ್ಸ್ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಅಪರಾಧಿಗಳೆಂದು ಘೋಷಿಸಲ್ಪಟ್ಟ ಅಪ್ಪ ಮತ್ತು ಮಗ ಬಾಂಬೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ತಂದೆ 2018ರಲ್ಲಿ ನಿಧನರಾದರು.
ಮೂವತ್ತು ವರ್ಷಗಳ ಬಳಿಕ ಈ ರೀತಿ ಅನುಮಾನದ ಪ್ರಯೋಜನ ಪಡೆದು ಖುಲಾಸೆಯಾದ ವ್ಯಕ್ತಿಯ ಹೆಸರು ಮನೋಹರ ಓವಲೇಕರ್. ಬಾಂಬೆ ಹೈಕೋರ್ಟ್‌ಗೆ 1998ರಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ ವೇಳೆ ಈತನ ವಯಸ್ಸು 28. ಹೈಕೋರ್ಟ್ ಸುದೀರ್ಘ ವಿಚಾರಣೆ ಬಳಿಕ ಮೇ 6ರಂದು ಈ ಪ್ರಕರಣದ ತೀರ್ಪು ನೀಡಿದೆ.