ಬೆಂಗಳೂರು: ಆಜಾನ್ V/S ಮಂತ್ರ ಪಠಣ ಎನ್ನುವ ರೀತಿಯಲ್ಲಿ ರಾಜ್ಯಾದ್ಯಂತ ಮತ್ತೊಂದು ರೀತಿಯ ಧರ್ಮ ಸಂಘರ್ಷದ ವಾತಾವರಣ ಸೃಷ್ಟಿಯಾಗುತ್ತಿದ್ದು, ಇಂತಹ ಸಂಘರ್ಷಗಳಿಗೆ ಅವಕಾಶ ನೀಡಬಾರದು ಎಂದು ಅಲ್ಪಸಂಖ್ಯಾತರ ನಿಯೋಗ ಸಿಎಂ ಬಸವರಾಜ್ ಬೊಮ್ಮಾಯಿ ಬಳಿ ಮನವಿ ಮಾಡಿದೆ.
ವಿಪಕ್ಷ ಉಪನಾಯಕ ಯು.ಟಿ. ಖಾದರ್ ನೇತೃತ್ವದ ಅಲ್ಪಸಂಖ್ಯಾತರ ನಿಯೋಗ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದು, ಆಜಾನ್ ವಿವಾದಕ್ಕೆ ಹೊಸ ನಿಯಮ ರೂಪಿಸುವಂತೆ ಮನವಿ ಮಾಡಿದೆ.
ನೆಟ್ಟಿಗರು ತಲೆಕೆರೆದುಕೊಳ್ಳುವಂತೆ ಮಾಡಿದೆ ಫುಟ್ಬಾಲ್ ಆಟಗಾರರ ಆಪ್ಟಿಕಲ್ ಇಲ್ಯೂಷನ್ ಫೋಟೋ..!
ಸಿಎಂ ಭೇಟಿ ಬಳಿಕ ಮಾತನಾಡಿದ ಶಾಸಕ ಯು.ಟಿ. ಖಾದರ್, ರಾಜ್ಯದಲ್ಲಿ ಕೆಲವೊಂದು ಶಕ್ತಿಗಳು ಮಾತ್ರ ಅಶಾಂತಿಯನ್ನುಂಟು ಮಾಡಲು ಯತ್ನಿಸುತ್ತಿವೆ. ಸರ್ಕಾರ ಶಾಂತಿ-ಸಾಮರಸ್ಯ ಮೂಡಿಸುವ ಕೆಲಸ ಮಾಡಬೇಕು. ಶಾಂತಿ-ಸಾಮರಸ್ಯ ನೆಲೆಸುವಂತೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದೇವೆ ಎಂದರು.
ಆಜಾನ್ ದ್ವನಿವರ್ಧಕಗಳ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಎಲ್ಲಿಯೂ ಹೇಳಿಲ್ಲ. ಆದರೆ ಶಬ್ಧ ಮಾಲಿನ್ಯದ ಬಗ್ಗೆ ಸರ್ಕಾರ ಕೋರ್ಟ್ ಆದೇಶದಂತೆ ನಿಯಮ ರೂಪಿಸಲಿ. ರಾಜ್ಯ ಸರ್ಕಾರದ ನಿರ್ಧಾರ ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.