ಬಿಸಿ ಬಿಸಿ ಸೂಪ್ ನಷ್ಟು ಬೆಸ್ಟ್ ಆಹಾರ ಇನ್ನೊಂದಿಲ್ಲ. ಅದರಲ್ಲೂ ವಿವಿಧ ತರಕಾರಿಗಳಿಂದ ಮಾಡಿದ ಸೂಪ್ ಇನ್ನಷ್ಟು ರುಚಿ ಮತ್ತು ಹೆಲ್ದಿ ಆಗಿರುತ್ತದೆ.
ದೇಹಕ್ಕೆ ತಂಪು ಸೋರೆಕಾಯಿ ತಿನ್ನುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಹಾಗಾದರೆ ಸೋರೆಕಾಯಿ ಸೂಪ್ ಮಾಡುವುದು ಹೇಗೆ ಅಂತ ತಿಳಿಯೋಣ.
ಬೇಕಾಗುವ ಸಾಮಾಗ್ರಿಗಳು
ಸೋರೆಕಾಯಿ ತುಂಡು 2 ಬಟ್ಟಲು
ಹೆಚ್ಚಿದ ಈರುಳ್ಳಿ 1
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1/2 ಸ್ಪೂನ್
ಕಾಯಿ ಹಾಲು 1/2 ಕಪ್
ಸಣ್ಣಗೆ ಹೆಚ್ಚಿದ ಬೀನ್ಸ್ ಮತ್ತು ಕ್ಯಾರೆಟ್ 1/2 ಕಪ್
ಸ್ವೀಟ್ ಕಾರ್ನ್ 1/2 ಬಟ್ಟಲು
ಕಾಳುಮೆಣಸಿನಪುಡಿ 1 ಸ್ಪೂನ್
ಉಪ್ಪು 1 ಸ್ಪೂನ್
ಬೆಣ್ಣೆ 1 ಸ್ಪೂನ್
ಟೈರ್ ಸ್ಪೋಟಗೊಂಡು 2 ಬೈಕ್ ಗಳಿಗೆ ಕಾರ್ ಡಿಕ್ಕಿ, ಇಬ್ಬರ ಸಾವು
ಮಾಡುವ ವಿಧಾನ
ಮೊದಲಿಗೆ ಸೋರೆಕಾಯಿ ತುಂಡುಗಳನ್ನು ಬೇಯಿಸಿ ರುಬ್ಬಿಕೊಳ್ಳಬೇಕು.
ಬಾಣಲಿಗೆ ಬೆಣ್ಣೆ ಹಾಕಿ ಬಿಸಿ ಮಾಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಈರುಳ್ಳಿ ಹಾಕಿ ಬಾಡಿಸಿಕೊಳ್ಳಬೇಕು. ನಂತರ ಇದಕ್ಕೆ ಮಿಶ್ರ ತರಕಾರಿ ಹಾಕಿ 2 ನಿಮಿಷ ಹುರಿದುಕೊಳ್ಳಬೇಕು.
ಬಳಿಕ ಕಾಯಿ ಹಾಲು, ಬೆಂದ ಸೋರೆಕಾಯಿ ಮಿಶ್ರಣ, ಉಪ್ಪು, ಕಾಳು ಮೆಣಸಿನ ಪುಡಿ ಹಾಕಿ ಐದು ನಿಮಿಷಗಳ ಕಾಲ ಕುದಿಸಿ. ಈಗ ಬಿಸಿ ಬಿಸಿ ಹೆಲ್ದಿ ಸೋರೆಕಾಯಿ ಸೂಪ್ ರುಚಿ ನೋಡಿ.