ಬೆಂಗಳೂರು; 545 ಪಿಎಸ್ಐ ಹುದ್ದೆ ನೆಮಕಾತಿ ಪರೀಕ್ಷಾ ಅಕ್ರಮ ಪ್ರಕರಣ ಹಿನ್ನೆಲೆಯಲ್ಲಿ ನೇಮಕಾತಿ ವಿಭಾಗದಲ್ಲಿ ಭಾರಿ ಬದಲಾವಣೆ ಮಾಡಲಾಗಿದ್ದು, 12 ಜನರನ್ನು ವರ್ಗಾವಣೆ ಮಾಡಿ ಎಡಿಜಿಪಿ ಹಿತೇಂದ್ರ ಆದೇಶ ಹೊರಡಿಸಿದ್ದಾರೆ.
ನೇಮಕಾತಿ ವಿಭಾಗದಲ್ಲಿ ಒಟ್ಟು 17 ಜನರು ಕಾರ್ಯನಿರ್ವಹಿಸುತ್ತಿದ್ದರು. ಅವರಲ್ಲಿ 12 ಜನರನ್ನು ಬೇರೆ ಬೇರೆ ಕಡೆ ವರ್ಗಾವಣೆ ಮಾಡಲಾಗಿದೆ. ಪ್ರಸ್ತುತ ಕಚೇರಿ ಕರ್ತವ್ಯ ನಿರ್ವಹಣೆಗಾಗಿ 5 ಜನರನ್ನು ಮಾತ್ರ ಉಳಿಸಿಕೊಳ್ಳಲಾಗಿದ್ದು, ಖಾಲಿ ಇರುವ 12 ಸ್ಥಾನಕ್ಕೆ ಅಧಿಕಾರಿಗಳು, ಸಿಬ್ಬಂದಿಗಳ ನೇಮಕದ ಬಳಿಕ ಉಳಿದ ಐವರ ವರ್ಗಾವಣೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ನೇಮಕಾತಿ ಸಮಯದಲ್ಲಿ ಒಟ್ಟು 42 ಜನರು ಕಾರ್ಯನಿರ್ವಹಿಸುತ್ತಿದ್ದರು. 17 ಜನರು ನೇರವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಉಳಿದವರು ಅಗತ್ಯಕ್ಕೆ ಅನುಗುಣವಾಗಿ ಒಒಡಿ ಹಾಗೂ ಸ್ಪೆಷಲ್ ಡ್ಯೂಟಿ ಅನ್ವಯ ಕೆಲಸ ಮಾಡುತ್ತಿದ್ದರು.