ಕೋಲಾರ: ಕಳೆದ ಎರಡು ತಿಂಗಳ ಹಿಂದೆಯಷ್ಟೇ ಕುಸಿತ ಕಂಡಿದ್ದ ಟೊಮೆಟೊ ದರ ಏರುಗತಿಯಲ್ಲಿ ಸಾಗುತ್ತಿದೆ. ದಿನೇದಿನೇ ಟೊಮ್ಯಾಟೋ ಬೆಲೆ ಏರಿಕೆಯಾಗುತ್ತಿರುವುದದಿಂದ ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ.
ಇತ್ತೀಚೆಗೆ ಬೆಲೆ ಕಡಿಮೆಯಾದ ಸಂದರ್ಭದಲ್ಲಿ ರಸ್ತೆಗೆ ಟೊಮೆಟೊ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದ ರೈತರಿಗೆ ಟೊಮೆಟೊ ಬೆಲೆ ಏರಿಕೆಯಿಂದ ಖುಷಿಯಾಗಿದೆ. ಆದರೆ, ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿಗೀಡಾಗಿದೆ. ಕೈಗೆ ಬಂದ ಅಲ್ಪಸ್ವಲ್ಪ ಬೆಳೆಗೆ ಉತ್ತಮ ಧಾರಣೆ ಸಿಕ್ಕಿದೆ.
ರಾಜ್ಯದ ಪ್ರಮುಖ ಟೊಮೆಟೊ ಮಾರುಕಟ್ಟೆಗಳಲ್ಲಿ ಒಂದಾದ ಕೋಲಾರ ಮಾರುಕಟ್ಟೆಯಲ್ಲಿ ಶುಕ್ರವಾರ 15 ಕೆಜಿ ಟೊಮೇಟೊ ಬಾಕ್ಸ್ 1080 ರೂಪಾಯಿಗೆ ಮಾರಾಟವಾಗಿದೆ. ಚಿಲ್ಲರೆ ದರ ಕೆಜಿಗೆ 100 ರೂಪಾಯಿ ಗಡಿದಾಟಿದೆ.
ಅಕಾಲಿಕ ಮಳೆಯಿಂದ ಟೊಮೆಟೊ ಬೆಲೆ ಹಾಳಾಗಿದ್ದು ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿರುವುದರಿಂದ ಟೊಮೆಟೊ ದರ ಏರಿಕೆ ಕಾಣುತ್ತಿದೆ. ದರ ಇನ್ನಷ್ಟು ಏರಿಕೆಯಾಗಬಹುದು ಎಂದು ಹೇಳಲಾಗಿದೆ.