alex Certify ʼವರ್ಕ್ ಫ್ರಮ್ ಹೋಂʼ ಸಾಕು ಅಂದಿದ್ದಕ್ಕೆ ಕೆಲಸವನ್ನೇ ತೊರೆಯಲು ಮುಂದಾಗಿದ್ದಾರೆ ಈ ಕಂಪನಿ ಉದ್ಯೋಗಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವರ್ಕ್ ಫ್ರಮ್ ಹೋಂʼ ಸಾಕು ಅಂದಿದ್ದಕ್ಕೆ ಕೆಲಸವನ್ನೇ ತೊರೆಯಲು ಮುಂದಾಗಿದ್ದಾರೆ ಈ ಕಂಪನಿ ಉದ್ಯೋಗಿಗಳು

ಗ್ಯಾಜೆಟ್ ಕ್ಷೇತ್ರದ ದಿಗ್ಗಜ ಆಪಲ್ ಕಂಪನಿಯ ಈ ಒಂದು ತೀರ್ಮಾನದ ವಿರುದ್ಧ ಅದೇ ಕಂಪನಿ ಸಿಬ್ಬಂದಿ ಸಿಟ್ಟಿಗೆದ್ದಿದ್ದಾರೆ. ಒಂದಷ್ಟು ಮಂದಿಯಂತೂ ಕೆಲಸ ತೊರೆಯಲೂ ಸಿದ್ಧರಾಗಿದ್ದಾರೆ.

ಇಂತಹ ಒಂದು ನಿರ್ಧಾರಕ್ಕೆ ಬರಲು ಮುಖ್ಯ ಕಾರಣ, ಕಂಪನಿ ಮ್ಯಾನೇಜ್‌ಮೆಂಟ್ ವರ್ಕ್ ಫ್ರಂ ತೆಗೆದು ಕಚೇರಿಗೆ ಹಾಜರಾಗುವಂತೆ ತನ್ನ ಸಿಬ್ಬಂದಿಗೆ ಬರ ಹೇಳಿದ್ದೇ ತಪ್ಪಾಗಿ ಹೋಯಿತು. ಸಿಬ್ಬಂದಿ ಅಸಮಾಧಾನಗೊಂಡಿದ್ದಾರೆ. ಈ ಅಸಮಾಧಾನ ಪ್ರಮಾಣ ಎಷ್ಟಿದೆ ಎಂದರೆ ಕೆಲಸವನ್ನೇ ತ್ಯಜಿಸುತ್ತೇವೆ ಹೊರತು ವರ್ಕ್ ಫ್ರಂ ಬಿಡಲೊಲ್ಲೆವು ಎಂದು ಪಟ್ಟುಹಿಡಿದ್ದಾರೆ.

ಕೋವಿಡ್ ಸಾಂಕ್ರಾಮಿಕ ಎರಡು ವರ್ಷಗಳು ಕಾಡಿದ ನಂತರ ಜೀವನ‌ ಸಹಜ‌ಸ್ಥಿತಿಗೆ ಮರಳುತ್ತಿದೆ. ಹೀಗಾಗಿ ಟೆಕ್ ಕಂಪನಿಗಳು ವರ್ಕ್ ಫ್ರಂ ಹೋಮ್ ತೆಗೆದು ತಮ್ಮ ಸಿಬ್ಬಂದಿಯನ್ನು ಕಚೇರಿಗೆ ಮರಳಲು ಹೇಳುತ್ತಿವೆ.

ವಾರದ ಹೆಚ್ಚಿನ ದಿನಗಳಲ್ಲಿ ಉದ್ಯೋಗಿಗಳನ್ನು ಕಚೇರಿಯಲ್ಲಿ ಇರುವಂತೆ ಉತ್ತೇಜಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಆದರೆ, ಉದ್ಯೋಗಿಗಳು ಹೊಸ ಕ್ರಮಗಳಿಂದ ಸಂತಸಗೊಂಡಂತೆ ಕಾಣುತ್ತಿಲ್ಲ.

ನಗು ತರಿಸುತ್ತೆ 7.5 ಗಂಟೆ ತಡವಾಗಿ ಕಚೇರಿಗೆ ಬಂದ ಯುವತಿ ಕೊಟ್ಟ ಕಾರಣ

ಸುಮಾರು 76 ಪ್ರತಿಶತದಷ್ಟು ಆಪಲ್ ಸಿಬ್ಬಂದಿ ಕಚೇರಿ ಹಿಂತಿರುಗಬೇಕೆಂಬ ಕಂಪನಿಯ ನಿರ್ಧಾರವನ್ನು ವಿರೋಧಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಪ್ರಸ್ತುತ ವಾರಕ್ಕೊಮ್ಮೆ ಕಚೇರಿಯಲ್ಲಿರಬೇಕು ಎಂಬ ನಿಯಮ ಇದ್ದು, ಮೇ 23ರಿಂದ ವಾರದಲ್ಲಿ ಕನಿಷ್ಠ ಮೂರು ದಿನಗಳ ಕಾಲ ಕಚೇರಿಯಲ್ಲಿರಬೇಕು ಎಂದು ಆಪಲ್ ಸಿಇಒ ಟಿಮ್ ಕುಕ್ ಸೂಚಿಸಿದ್ದರು. ಇದು ಉದ್ಯೋಗಿಗಳನ್ನು ಹೆಚ್ಚು ನಿರಾಶೆಗೊಳಿಸಿದೆ.

ಸಮೀಕ್ಷೆಯ ಪ್ರಕಾರ ಕಚೇರಿಗೆ ವಾಪಸಾಗಬೇಕೆಂಬ ಕಚೇರಿ ನೀತಿಯ ಬಗ್ಗೆ ಹೆಚ್ಚಿನ ಆಪಲ್ ಉದ್ಯೋಗಿಗಳು ಅಸಮಾಧಾನಗೊಂಡಿದ್ದಾರೆ. ಕೆಲವರು ಕೆಲಸವನ್ನೇ ತೊರೆದು ಬೇರೆ ಕಂಪನಿ ಸೇರಲು ಬಯಸಿದ್ದಾರೆ.‌

ಏಪ್ರಿಲ್ 13 ಮತ್ತು ಏಪ್ರಿಲ್ 19 ರ ನಡುವೆ 652 ಆಪಲ್ ಉದ್ಯೋಗಿಗಳಿಂದ ಉತ್ತರಗಳನ್ನು ಸಮೀಕ್ಷೆಗಾಗಿ ಸಂಗ್ರಹಿಸಲಾಗಿತ್ತು.

ಅಧ್ಯಯನದ ಪ್ರಕಾರ ಸುಮಾರು 56 ಪ್ರತಿಶತದಷ್ಟು ಉದ್ಯೋಗಿಗಳು ಆಪಲ್ ಅನ್ನು ಅದರ ಕಚೇರಿ ಬರಬೇಕೆಂಬ ಅವಶ್ಯಕತೆಯ ಕಾರಣದಿಂದ ತೊರೆಯಲು ಬಯಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...