ಬೆಂಗಳೂರು: ಮುಂದಿನ ದಿನಗಳಲ್ಲಿ ನಾನೂ ವೆಬ್ ಸಿರೀಸ್ ನಲ್ಲಿ ನಟಿಸುತ್ತೇನೆ. ಇತ್ತೀಚೆಗೆ ವೆಬ್ ಸಿರೀಸ್ ಗಳು ಪ್ರಮುಖ ಪಾತ್ರ ವಹಿಸುತ್ತಿವೆ. ವೆಬ್ ಸಿರೀಸ್ ಬಗ್ಗೆ ಎಲ್ಲರೂ ಆಸಕ್ತಿ ತೋರುತ್ತಿದ್ದಾರೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಿಳಿಸಿದ್ದಾರೆ.
OTT APP ರಿಲೀಸ್ ಬಳಿಕ ಮಾತನಾಡಿದ ನಟ ಶಿವರಾಜ್ ಕುಮಾರ್, ಟೆಕ್ನಾಲಜಿಗೆ ನಾವು ಹೊಂದಿಕೊಳ್ತಾ ಹೋಗಬೇಕು. ಸಿನಿಮಾ ಮಾಡೋದಷ್ಟೇ ಅಲ್ಲ ನಿರ್ಮಾಣ ಮಾಡ್ತೀವಿ. ವೆಬ್ ಸಿರೀಸ್ ನಿರ್ಮಾಣವನ್ನೂ ಮಾಡುತ್ತೇವೆ. ವೆಬ್ ಸಿರೀಸ್ ನಿರ್ಮಾಣದಲ್ಲಿ ಮಗಳು ಕೂಡ ಭಾಗಿಯಾಗುತ್ತಾಳೆ ಎಂದು ಹೇಳಿದರು.
ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ ಮಾಜಿ ಶಾಸಕ ವಶಕ್ಕೆ
ನಾನು ಯಂಗ್ ಕಾಣ್ತೀನಿ ಅಂತ ಎಲ್ಲರೂ ಹೇಳ್ತಾರೆ. ಯಂಗ್ ಗಿಂತಲೂ ಹೆಂಗೆಂಗೋ ಇರಲು ಇಷ್ಟ ನನಗೆ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
ಇನ್ನು ಹಿಂದಿ ರಾಷ್ಟ್ರಭಾಷೆ ವಿವಾದದ ವಿಚಾರವಾಗಿಯೂ ಮಾತನಾಡಿದ ಶಿವಣ್ಣ, ಎಲ್ಲಾ ಭಾಷೆಯೂ ಒಂದೇ ಎಂದು ರಾಷ್ಟ್ರಗೀತೆಯಲ್ಲಿದೆ. ಮಾತೃಭಾಷೆ ವಿಚಾರಕ್ಕೆ ಬಂದರೆ ಕನ್ನಡವೇ ನಮಗೆ ಮುಖ್ಯ. ನಮ್ಮ ಎಲ್ಲಾ ಭಾಷೆಯೂ ಭಾರತದ್ದೆ. ನಾವೆಲ್ಲರೂ ಒಂದೇ. ಭಾರತದಲ್ಲಿ ಎಲ್ಲಾ ಭಾಷೆಯೂ ಇದೆ. ನನಗೆ ಕನ್ನಡವೇ ಮುಖ್ಯ ಎಂದು ಹೇಳಿದ್ದಾರೆ.