alex Certify BIG NEWS: PSI ನೇಮಕಾತಿ ಅಕ್ರಮ; ಗೌರವಯುತವಾಗಿ ಬಂದು ಶರಣಾಗಿ; ಆರೋಪಿ ದಿವ್ಯಾ ಹಾಗರಗಿಗೆ ಗೃಹ ಸಚಿವರ ವಾರ್ನಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: PSI ನೇಮಕಾತಿ ಅಕ್ರಮ; ಗೌರವಯುತವಾಗಿ ಬಂದು ಶರಣಾಗಿ; ಆರೋಪಿ ದಿವ್ಯಾ ಹಾಗರಗಿಗೆ ಗೃಹ ಸಚಿವರ ವಾರ್ನಿಂಗ್

ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮದ ಆರೋಪಿ ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿ ನಾಪತ್ತೆಯಾಗಿ 3 ವಾರಗಳು ಕಳೆಯುತ್ತಿದ್ದರೂ ಸಿಐಡಿ ಅಧಿಕಾರಿಗಳಿಗೆ ಆಕೆಯ ಸುಳಿವು ಸಿಗುತ್ತಿಲ್ಲ. ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ತಲೆ ಮರೆಸಿಕೊಂಡಿರುವ ದಿವ್ಯಾಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಶೀಘ್ರದಲ್ಲಿಯೇ ದಿವ್ಯಾ ಹಾಗರಗಿಯನ್ನು ಬಂಧಿಸಲಾಗುವುದು. ಈಗಾಗಲೇ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿದೆ ಎಂದರು.

ದಿವ್ಯಾ ಹಾಗರಗಿ ಊರು ಬಿಟ್ಟು ಹೋಗಿದ್ದಾರೆ. ಗೌರವಯುತವಾಗಿ ಬಂದು ಪೊಲೀಸರಿಗೆ ಶರಣಾಗಲಿ ಇಲ್ಲವಾದಲ್ಲಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...